ಪ್ರಗತಿವಾಹಿನಿ ಸುದ್ದಿ ತ್ರಿಶೂರ್: ವಿಷಾನೀಲ ಸೇವಿಸಿ ಇಬ್ಬರು ಮಕ್ಕಳ ಸಹಿತ ದಂಪತಿ ಸಾವಿಗೀಡಾದ ದುರ್ಘಟನೆ ಕೇರಳದ ತ್ರಿಶೂರ್‌ನಲ್ಲಿ ನಡೆದಿದೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಪ್ರಕರಣದಂತೆ ಕಂಡುಬರುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
41 ವರ್ಷದ ಸಾಪ್ಟ್ವೇರ್ ಇಂಜಿನಿಯರ್, ಆತನ ಪತ್ನಿ, 14 ಮತ್ತು 7 ವರ್ಷದ ಇಬ್ಬರು ಮಕ್ಕಳು ಸಾವಿಗೀಡಾಗಿದ್ದಾರೆ. ಮನೆಯ ಮೊದಲ ಮಹಡಿಯ ಕೋಣೆಯಲ್ಲಿ ನಾಲ್ಕೂ ಜನ ಸಾವಿಗೀಡಾಗಿದ್ದಾರೆ.
ಗೊತ್ತಾಗಿದ್ದು ಹೇಗೆ ?
ಭಾನುವಾರ ಮಧ್ಯಾಹ್ನದವರೆಗೂ ಮನೆಯ ಬಾಗಿಲನ್ನು ಯಾರೂ ತೆರೆಯದಿದ್ದಾಗ ನೆರೆಹೊರೆಯವರಿಗೆ ಅನುಮಾನ ಬಂದು ಕಿಟಕಿಯ ಬಾಗಿಲು ತೆರೆದು ನೋಡಿದ್ದಾರೆ. ಆಗ ನಾಲ್ಕೂ ಜನ ನೆಲದಮೇಲೆ ಶವವಾಗಿ ಮಲಗಿರುವುದು ಗೊತ್ತಾಗಿದೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ.
ಪೊಲೀಸ್ ತನಿಖೆಯ ವೇಳೆ ಮನೆಯ ಕೋಣೆಯ ತುಂಬ ಕ್ಯಾಲ್ಸಿಂ ಕಾರ್ಬೋನೇಟ್ ಮತ್ತು ಜಿಂಕ್ ಆಕ್ಸೆöÊಡ್ ವಿಷಾನಿಲ ಹರಡಿದ್ದು ಗೊತ್ತಾಗಿದೆ. ಅಲ್ಲದೇ ವಿಷಾನಿಲ ಹಿರ ಹೋಗದಂತೆ ಕಿಟಕಿ ಮತ್ತು ಬಾಗಿಲುಗಳ ಸಂಧಿಗಳಿಗೆ ಅಂಟು ಪಟ್ಟಿ ಹಚ್ಚಲಾಗಿತ್ತು. ಈ ಹಿನ್ನೆಲೆಯಲ್ಲಿ ಇದು ಆತ್ಮಹತ್ಯೆ ಕೃತ್ಯವಿರಬಹುದು ಎಂದು ಪೊಲೀಸರು ಅಂದಾಜು ಮಾಡಿದ್ದಾರೆ.
ಇದಕ್ಕೆ ಪೂರಕವಾಗಿ ಹೇಳಿಕೆ ನೀಡಿರುವ ಮೃತರ ಕುಟುಂಬಸ್ಥರು, ಇತ್ತೀಚೆಗೆ ಸಾಪ್ಟ್ವೇರ್ ಇಂಜಿನಿಯರ್ ಕುಟುಂಬ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿತ್ತು. ಕಳೆದ ವಾರವಷ್ಟೇ ಬ್ಯಾಂಕಿನ ಲೋನ್ ತುಂಬುವAತೆ ನೋಟೀಸ್ ಸಹ ಬಂದಿತ್ತು. ಅಲ್ಲದೇ ಸೋಷಿಯಲ್ ಮೀಡಿಯಾಗಳಲ್ಲಿ ಸದಾ ಕಾಣಿಸಿಕೊಳ್ಳುತ್ತಿದ್ದ ಕುಟುಂಬ ಕಳೆದ ಒಂದು ವಾರದಿಂದ ಈಚೆ ಸೋಷಿಯಲ್ ಮೀಡಿಯಾಗಳಲ್ಲಿ ಯಾವುದೇ ಪೋಸ್ಟ್ ಹಾಕುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಮೃತದೇಹಗಳನ್ನು ಪೋಸ್ಟ್ ಮಾರ್ಟ್ಂ ನಡೆಸಲಾಗಿದ್ದು ವರದಿ ಬಂದ ಬಳಿಕವೇ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ ಎಂದು ತ್ರಿಶೂರ್ ಪೊಲೀಸರು ಹೇಳಿದ್ದಾರೆ.
ಭಾರತದ 31 ಮೀನುಗಾರರು ಪಾಕ್ ವಶಕ್ಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ