ಪ್ರಗತಿವಾಹಿನಿ ಸುದ್ದಿ, ವಾಷಿಂಗ್ಟನ್: ಕೋವಿಡ್-19 ವೈರಸ್ “ಚೀನೀ ಸರಕಾರಿ ನಿಯಂತ್ರಿತ ಲ್ಯಾಬ್ ನಿಂದ ‘ಬಹುಶಃ’ ಸೋರಿಕೆಯಾಗಿದೆ ಎಂದು ಎಫ್‌ಬಿಐ ಸಂಸ್ಥೆ ಹೇಳಿದೆ.
ಎಫ್‌ಬಿಐ ನಿರ್ದೇಶಕ ಕ್ರಿಸ್ಟೋಫರ್ ವ್ರೇ ಈ ಕುರಿತು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
“ಸಾಂಕ್ರಾಮಿಕ ರೋಗದ ಮೂಲ ವುಹಾನ್ (ಚೀನಾ) ನಲ್ಲಿ ಸಂಭವನೀಯ ಪ್ರಯೋಗಾಲಯ ಘಟನೆ ಎಂದು ಎಫ್‌ಬಿಐ ಮೌಲ್ಯಮಾಪನ ಮಾಡಿದೆ” ಎಂದು ಅವರು ಹೇಳಿದ್ದಾರೆ. COVID-19 ನ ಮೂಲದ ಬಗ್ಗೆ ಎಫ್‌ಬಿಐ ತನ್ನ ವರ್ಗೀಕೃತ ತೀರ್ಪನ್ನು ದೃಢಪಡಿಸಿರುವುದು ಇದೇ ಮೊದಲ ಬಾರಿಯಾಗಿದೆ.
ಇಡೀ ಜಗತ್ತಿನ ಆರೋಗ್ಯ, ಆರ್ಥಿಕತೆ ಕೆಡಿಸಿದ ಮಾರಣಾಂತಿಕ ಸೋಂಕು ಕೋವಿಡ್- 19 ಚೀನಾದಲ್ಲೇ ಮೊದಲು ಕಾಣಿಸಿಕೊಂಡು ಇಡೀ ಜಗತ್ತನ್ನು ವ್ಯಾಪಿಸಿ ಸತತ ಎರಡು ವರ್ಷಗಳ ಕಾಲ ಇಡೀ ವಿಶ್ವವನ್ನೇ ಸ್ತಬ್ಧಗೊಳಿಸಿತ್ತು. ಆದರೆ ಅದು ಹೇಗೆ ಹುಟ್ಟಿಕೊಂಡಿತು ಎಂಬ ಬಗೆಗಿನ ಜಿಜ್ಞಾಸೆಗಳಿಗೆ ಈವರೆಗೂ ತೆರೆಬಿದ್ದಿರಲಿಲ್ಲ.
ಬಾವಲಿ, ಒಂಟೆ ಇತ್ಯಾದಿಗಳಿಂದ ಹುಟ್ಟಿಕೊಂಡ ಬಗ್ಗೆ ಸಂದೇಹಗಳನ್ನು ಮೊದಲಿಗೆ ವ್ಯಕ್ತಪಡಿಸಲಾಗಿತ್ತು. ಕೊನೆಗೆ ಚೀನಾದಲ್ಲಿ ಸಿಕ್ಕಸಿಕ್ಕ ಪ್ರಾಣಿಗಳನ್ನೆಲ್ಲ ಕೊಂದು ತುನ್ನುವ ಚಾಳಿ ಈ ಸೋಂಕಿನ ಹುಟ್ಟಿಗೆ ಕಾರಣವಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಇದೇ ವೇಳೆ ವುಹಾನ್ ನ ಲ್ಯಾಬ್ ಒಂದರಿಂದ ಸೋರಿಕೆಯಾದ ಬಗ್ಗೆಯೂ ಆರೋಪಗಳಿದ್ದವು. ಆದರೆ ಯಾವುದೊಂದರಲ್ಲೂ ಸ್ಪಷ್ಟತೆ ಇರಲಿಲ್ಲ.
ಏತನ್ಮಧ್ಯೆ ಎಫ್‌ಬಿಐ ನಿರ್ದೇಶಕರ ಈ ಹೇಳಿಕೆ ಮತ್ತಷ್ಟು ಜಿಜ್ಞಾಸೆಗಳನ್ನು ಹುಟ್ಟುಹಾಕಿದೆ.
*SSLC ಪೂರ್ವ ಸಿದ್ಧತಾ ಪರೀಕ್ಷೆಗೂ ತಟ್ಟಿದ ಮುಷ್ಕರದ ಬಿಸಿ; ಎಕ್ಸಾಂ ಮುಂದೂಡಿಕೆ*
https://pragati.taskdun.com/sslcpreparatory-exampost-ponestate-govt-employees/
*ರಾಜ್ಯಾದ್ಯಂತ ಸರ್ಕಾರಿ ನೌಕರರ ಮುಷ್ಕರ ಆರಂಭ*
https://pragati.taskdun.com/7th-pay-commissiongovt-employeesstrike/
*ಪಿತೂರಿ ಆರೋಪ; ಕಾನ್ಸ್ ಟೇಬಲ್ ಅಮಾನತು*
https://pragati.taskdun.com/chikkamagaloreconstablesuspended/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ