
ಪ್ರಗತಿವಾಹಿನಿ ಸುದ್ದಿ; ಕಾರವಾರ: ಕೋವಿಡ್ 19 ತಡೆಗಟ್ಟುವಿಕೆಗೆ ಜನರಲ್ಲಿ ಜಾಗೃತಿ ಮೂಡಿಸಲು ಆಧುನಿಕ ತಂತ್ರಜ್ಞಾನದ ಬೃಹತ್ ಎಲ್.ಇ.ಡಿ ಪರದೆಯ ಪ್ರಚಾರ ವಾಹನಕ್ಕೆ ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ ಚಾಲನೆ ನೀಡಿದರು.
ಶನಿವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೋವಿಡ್ -19 ತಡೆಗೆ ದೃಶ್ಯ ಮತ್ತು ಶ್ರವ್ಯದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿರುವ ಎಲ್.ಇ.ಡಿ ಪ್ರಚಾರ ವಾಹನಕ್ಕೆ ಚಾಲನೆ ನೀಡಲಾಯಿತು.
ನವಂಬರ್ 14 ರಿಂದ್ ಜಿಲ್ಲೆಯ 12 ತಾಲೂಕುಗಳ ಆಯ್ದ ಗ್ರಾಮಪಂಚಾತಿಗಳಲ್ಲಿ ಪ್ರತಿದಿನ 15 ಗ್ರಾಮಗಳಂತೆ ಒಟ್ಟು 180 ಗ್ರಾಮಗಳಲ್ಲಿ ಎರಡು ಎಲ್.ಇ.ಡಿ ವಾಹನಗಳು ಸಂಚರಿಸಿ, ಸಾರ್ವಜನಿಕರು ಹೆಚ್ಚು ಜಾಗೃತಿ ವಹಿಸಬೇಕು. ಹಬ್ಬದ ಸರಣಿ ಹಾಗೂ ಚಳಿಗಾಲದ ಸಂದರ್ಭದಲ್ಲಿ ಕೋವಿಡ್ ವೈರಾಣು ಹೆಚ್ಚು ಅಪಾಯಕಾರಿಯಾಗಿದ್ದು, ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಕಾಲಕಾಲಕ್ಕೆ ಕೈ ತೋಳೆದುಕೊಳ್ಳಬೇಕು, ಸ್ಯಾನಿಟೈಸರ್ ಬಳಸಬೇಕು. ಕೋವಿಡ್ ವೈರಾಣುವಿಗೆ ಲಸಿಕೆ ಬರುವವರೆಗೂ ಮುಂಜಾಗ್ರತಾ ಕ್ರಮಗಳೇ ಪರಿಹಾರವಾಗಿದ್ದು, ಗರಿಷ್ಠ ಎಚ್ಚರಿಕೆಯಿಂದ ಕೋವಿಡ್ ಸೋಂಕು ತಗುಲದಂತೆ ಕೈಗೊಳ್ಳಬೇಕೆಂಬ ಸಂದೇಶಗಳನ್ನು ಪ್ರಸಾರ ಮಾಡಲಿವೆ.