Latest

ಕೋವಿಡ್ 3ನೇ ಅಲೆ ಎಚ್ಚರಿಕೆ; ಮಕ್ಕಳು ಅನುಸರಿಸಬೇಕಾದ ಗೈಡ್ ಲೈನ್ ಇಲ್ಲಿದೆ

 ಕೇಂದ್ರ ಆರೋಗ್ಯ ಇಲಾಖೆ ಮಕ್ಕಳಿಗೆ ಗೈಡ್ ಲೈನ್ಸ್ ಬಿಡುಗಡೆ ಮಾಡಿದೆ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೇಶದಲ್ಲಿ ಕೊರೊನಾ ಮೂರನೇ ಅಪ್ಪಳಿಸುವುದು ಖಚಿತ ಎಂದು ಎಚ್ಚರಿಸಿರುವ ತಜ್ನರು ಅಕ್ಟೋಬರ್ ಅಥವಾ ನವೆಂಬರ್ ವೇಳೆಗೆ ಮೂರನೇ ಅಲೆ ಆರಮ್ಭವಾಗಲಿದ್ದು, ಮಕ್ಕಳ ಮೇಲೆ ಹೆಚ್ಚು ಪ್ರಭಾವ ಬೀರಲಿದೆ ಎಂದು ಹೇಳಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಕ್ಕಳಿಗಾಗಿಯೇ ಪ್ರತ್ಯೇಕವಾಗಿ ಮಾರ್ಗಸೂಚಿ ಬಿಡುಗಡೆ ಮಾಡಿದೆ.

* 5 ವರ್ಷದೊಳಗಿನ ಮಕ್ಕಳಿಗೆ ಕೊರೊನಾ ಪರಿಣಾಮಗಳು ಕಡಿಮೆ. ಆದರೆ 6-11 ವರ್ಷದ ಮಕ್ಕಳು ಮಾಸ್ಕ್ ಧರಿಸುವುದು ಉತ್ತಮ
* 12 ವರ್ಷ ಮೇಲ್ಪಟ್ಟ ಮಕ್ಕಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು
*ರೆಮ್ ಡಿಸಿವಿರ್ ಔಷಧವನ್ನು ಮಕ್ಕಳಿಗೆ ಬಳಸುವಂತಿಲ್ಲ
*ಮಕ್ಕಳಲ್ಲಿ ಕಡಿಮೆ ತೀವ್ರತೆ ಸೋಂಕು ಇದ್ದಾಗ ಸ್ಟಿರಾಯ್ಡ್ ಬಳಸುವಂತಿಲ್ಲ
*ಸಾಧಾರಣವಾದ ಕೊರೊನಾ ಲಕ್ಷಣವಿರುವ ಮಕ್ಕಳಗೆ ಆಕ್ಸಿಜನ್ ಥೆರಪಿ ನೀಡಬೇಕು
*ಪ್ರತಿ ನಾಲ್ಕು ಗಂಟೆಗೊಮ್ಮೆ ಪ್ಯಾರಾಸಿಟಮಲ್ ನೀಡಬೇಕು
*ಮಕ್ಕಳಿಗೆ 6 ನಿಮಿಷಗಳ ವಾಕಿಂಗ್ ಟೆಸ್ಟ್ ಮಾಡಬೇಕು
*ಮಕ್ಕಳಲ್ಲಿ ರಕ್ತದ ಆಕ್ಸಿಜನ್ ಸ್ಯಾಚುರೇಷನ್ ಮಟ್ಟ ಪರೀಕ್ಷಿಸಬೇಕು.

ಕೊರೊನಾ 3ನೇ ಅಲೆ ಖಚಿತ; ಏಮ್ಸ್ ಮುಖ್ಯಸ್ಥರ ಎಚ್ಚರಿಕೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button