ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೇಶದಲ್ಲಿ ಕೊರೊನಾ ಮೂರನೇ ಅಲೆ ಆರಂಭವಾಗಿದೆ ಎಂದು ಚಂಡೀಗಢ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸ್ನಾತಕೋತ್ತರ ಸಂಸ್ಥೆಯ ನಿರ್ದೇಶಕ ಡಾ.ಜಗತ್ ರಾಮ್ ತಿಳಿಸಿದ್ದಾರೆ.
ಕೋವಿಡ್ 3ನೇ ಅಲೆ ಆರಂಭವಾಗಿದೆ. ಅನೇಕ ಮಕ್ಕಳಲ್ಲಿ ಈಗಾಗಲೇ ಪ್ರತಿಕಾಯಗಳು ಉತ್ಪತ್ತಿಯಾಗಿವೆ. ಹಾಗಾಗಿ ಮೂರನೇ ಅಲೆ ಮಕ್ಕಳಿಗೆ ಮಾರಣಾಂತಿಕವಾಗಿ ಪರಿಣಮಿಸಲ್ಲ ಎಂದು ತಿಳಿಸಿದೆ,.
ಚಂಡೀಗಢದಲ್ಲಿ ಸುಮಾರು 2700 ಮಕ್ಕಳನ್ನು ಸರ್ವೆ ಮಾಡಲಾಗಿದ್ದು, ಈ ವೇಳೆ ಶೇ.71ರಷ್ಟು ಮಕ್ಕಳಲ್ಲಿ ಆಂಟಿ ಬಾಡಿ ಅಭಿವೃದ್ಧಿಯಾಗಿದೆ. ಹೀಗಾಗಿ ಮಕ್ಕಳು ಮೂರನೇ ಅಲೆಯಿಂದ ದೊಡ್ಡ ಪ್ರಮಾಣದಲ್ಲಿ ಬಾಧಿತರಾಗುವುದಿಲ್ಲ ಎಂದು ಪಿಜಿಐಎಂಇಆರ್ ನಿರ್ದೇಶಕ ಡಾ.ಜಗತ್ ರಾಮ್ ತಿಳಿಸಿದ್ದಾರೆ.
ಮಹಾರಾಷ್ಟ್ರ ಹಾಗೂ ದೆಹಲಿಯಲ್ಲಿಯೂ ಸರ್ವೆ ಮಾಡಲಾಗಿದ್ದು, ಅಲ್ಲಿಯೂ ಕೂಡ ಶೇ.50-70ರಷ್ಟು ಮಕ್ಕಳಲ್ಲಿ ಪ್ರತಿಕಾಯ ಉತ್ಪತ್ತಿಯಾಗಿದ್ದು ಕಂಡುಬಂದಿದೆ ಎಂದು ತಿಳಿಸಿದ್ದಾರೆ.
ಹಾಡಹಗಲೇ ನಡುರಸ್ತೆಯಲ್ಲಿ ಯುವತಿಗೆ ಮೈ-ಕೈ ಮುಟ್ಟಿ ಲೈಂಗಿಕ ಕಿರುಕುಳ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ