Kannada NewsKarnataka NewsLatest

ಬೆಳಗಾವಿ ಪಾಲಿಕೆ ವತಿಯಿಂದ ಕೋವಿಡ್ ಕೇರ್ ಸೆಂಟರ್; ಇಲ್ಲಿದೆ ಸಮಗ್ರ ಮಾಹಿತಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ನಗರದ ಕೊರೋನಾ ಸೋಂಕಿತರಿಗಾಗಿ ಮಹಾನಗರ ಪಾಲಿಕೆಯ ವತಿಯಿಂದ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ.

ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಸಾರ್ವಜನಿಕರಿಗೆ ಕೋವಿಡ್-೧೯ ಸೋಂಕಿನ ಪಾಸಿಟಿವ್ ವರದಿ ಆದಲ್ಲಿ ಕೋವಿಡ್-೧೯ ಸೋಂಕು ಮನೆಯ ಇತರೆ ಸದಸ್ಯರಿಗೆ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಹಾಗೂ ಸೂಕ್ತ ಸಮಯಕ್ಕೆ ವೈದ್ಯಕೀಯ ಚಿಕಿತ್ಸೆ ನೀಡಲು ಅನುವಾಗುವಂತೆ ಪಾಲಿಕೆ ವ್ಯಾಪ್ತಿಯಲ್ಲಿ ಈ ಕೆಳಗಿನಂತೆ ಸರಕಾರಿ / ಸಂಘ ಸಂಸ್ಥೆಗಳ ಮೂಲಕ ಕೋವಿಡ್ ಕೇರ್ ಸೆಂಟರ್‌ಗಳನ್ನು ತೆರೆಯಲಾಗಿದೆ.

ಕೇಂದ್ರದಲ್ಲಿ ಉಚಿತ ಉಟೋಪಚಾರದ ವ್ಯವಸ್ಥೆ ಹಾಗೂ ವೈದ್ಯಕೀಯ ವ್ಯವಸ್ಥೆ ಇರುತ್ತಿದ್ದು, ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರು ಕೋವಿಡ್-೧೯ ಸೋಂಕಿನ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಪರೀಕ್ಷೆಗೊಳಪಟ್ಟು, ಪಾಸಿಟಿವ್ ವರದಿ ಬಂದಲ್ಲಿ ಸೋಂಕು ಮನೆಯ ಇತರೆ ಸದಸ್ಯರಿಗೆ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ತೆರೆಯಲಾಗಿರುವ ಕೋವಿಡ್ ಕೇರ್ ಕೇಂದ್ರದಲ್ಲಿ ದಾಖಲಾಗಿ ಸೂಕ್ತ ಚಿಕಿತ್ಸೆ ಪಡೆಯಲು ಹಾಗೂ ಸೋಂಕು ದೃಢಪಟ್ಟಿರುವವರು ನಿರ್ಲಕ್ಷಿಸದೇ ಸದರಿ ಕೋವಿಡ್ ಕೇರ್ ಸೆಂಟರ್‌ಗಳ ಸದುಪಯೋಗ ಪಡೆದುಕೊಂಡು ಕೋವಿಡ್-೧೯ ರೋಗ ಹರಡುವಿಕೆಯನ್ನು ತಡೆಗಟ್ಟಲು ಸಹಕರಿಸಬೇಕು ಎಂದು ಪಾಲಿಕೆ ಆಯುಕ್ತ ಜಗದೀಶ್ ಕೆ.ಎಚ್. ಕೋರಿದ್ದಾರೆ.

ಸರಕಾರಿ ಕೋವಿಡ್ ಕೇರ್ ಸೆಂಟರ್ ಸಂಪರ್ಕಿಸಬೇಕಾದವರ ಹೆಸರು & ಹುದ್ದೆ ಸಂಪರ್ಕಿಸಬೇಕಾದ ದೂ. ಸಂಖ್ಯೆ ಇಲ್ಲಿದೆ –

೧. ದೇವರಾಜ ಅರಸ್ ವಸತಿ ನಿಲಯ, ಸುಭಾಷ ನಗರ  ಗೋಪಾಲ ವ್ಹಿ. ಸುಖ್ತೆ, ಸಹಾಯಕ ನಿರ್ದೇಶಕರು – ೭೯೭೫೨೮೨೫೬೦ / ೯೬೨೦೩೭೨೦೫೦
೨. ಕುಮಾರಸ್ವಾಮಿ ಲೇಔಟ್, ವಸತಿ ನಿಲಯ, ಬೆಳಗಾವಿ ಶಂಕರ ಎಸ್. ಗೋಕಾವಿ, ಲೆಕ್ಕಾಧೀಕ್ಷಕರು- ೯೪೪೯೯೮೩೩೭೭ / ೯೬೨೦೮೪೨೦೫೦
೩. ಕ್ರೀಡಾ ವಸತಿ ನಿಲಯ, ನೆಹರು ನಗರ, ಬೆಳಗಾವಿ ಡಾ|| ಸಂಜಯ ಡುಮ್ಮಗೋಳ, ಆರೋಗ್ಯಾಧಿಕಾರಿಗಳು – ೮೧೯೭೮೮೮೫೮೭
೪. ಬಿಸಿಎಮ್ ಹಾಸ್ಟೇಲ್, ಸಂಗಮೇಶ್ವರ ನಗರ, ಬೆಳಗಾವಿ ಡಾ|| ಸಂಜಯ ಡುಮ್ಮಗೋಳ, ಆರೋಗ್ಯಾಧಿಕಾರಿಗಳು – ೮೧೯೭೮೮೮೫೮೭

ಖಾಸಗಿ / ಸಂಘ ಸಂಸ್ಥೆಗಳ ಮೂಲಕ ತೆರೆಯಲಾಗಿರುವ ಕೋವಿಡ್ ಕೇರ್ ಸೆಂಟರ್‌ಗಳು
ಅ. ನಂ. ಕೋವಿಡ್ ಕೇರ್ ಸೆಂಟರ್ ಸಂಪರ್ಕಿಸಬೇಕಾದ ದೂ. ಸಂಖ್ಯೆ
೧. ಮದಿನಿ ಫೌಂಡೇಶನ್ ೯೩೭೯೨೩೦೬೭೪
೨. ಇಂಡಿಯನ್ ಆಯಲ್ ಸರ್ವೋ ೯೪೪೮೨೮೯೯೫೫
೩. ಹಿಂಡಲ್ಕೋ ಇಂಡಟ್ಟ್ರಿಸ್ ೯೮೪೪೩೬೫೫೭೬
೪. ಎಂ.ಇ.ಎಸ್. ಮರಾಠಾ ಮಂದಿರ ಕಲ್ಯಾಣ ಮಂಟಪ ೭೩೪೯೬೭೦೧೪೬
೫. ರಾಮ್ ಕೇಶವ್ ಲಾಡ್ಜ್, ಅನಗೋಳ ನಾಕಾ ೭೮೨೯೬೩೯೦೩೪
೬. ಸಂತ ಮೀರಾ ಸ್ಕೂಲ್, ಅನಗೋಳ ೯೮೪೫೬೮೯೨೪೧
೭. ಕೆ.ಎಲ್.ಇ. ಲಿಂಗರಾಜ್ ಕಾಲೇಜ್ ಕ್ಯಾಂಪಸ್, ಬೆಳಗಾವಿ ೯೬೨೦೮೫೦೩೨೬

ಅದರಂತೆ, ಸೋಂಕಿತ ವ್ಯಕ್ತಿಗಳಿಗೆ ಅಗತ್ಯತೆಯಂತೆ ಬೆಡ್ ಸೌಲಭ್ಯ, ಸೂಕ್ತ ವೈದ್ಯಕೀಯ ನೆರವು / ಮಾಹಿತಿ ಹಾಗೂ ಇತರೆ ಕೋವಿಡ್-೧೯ ಗೆ ಸಂಬಂಧಿಸಿದ ವಿಷಯಕ್ಕೆ ಯಾವುದೇ ಮಾಹಿತಿ ಅವಶ್ಯವಾದಲ್ಲಿ ಬೆಳಗಾವಿ ನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೋವಿಡ್ ವಾರ್ ರೂಮ್‌ನ ಸಂಪರ್ಕ ಸಂಖ್ಯೆ ೦೮೩೧-೨೪೩೬೯೬೦ ಕ್ಕೆ ಸಂಪರ್ಕಿಸಲು ಕೋರಿದೆ.

 

ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ

ಬೆಳಗಾವಿ ಮಹಾನಗರದ ಜನತೆಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಸರಕಾರಿ ಸೌಲಭ್ಯ ಪಡೆಯಲು ನಗರದ ವಿವಿಧ ಆಸ್ಪತ್ರೆಗಳ ಆರೋಗ್ಯ ಮಿತ್ರ ಸಂಪರ್ಕ ಸಂಖ್ಯೆ ಈ ಕೆಳಗಿನಂತಿದ್ದು, ಸದರಿ ಯೋಜನೆಯ ಸದುಪಯೋಗಕ್ಕಾಗಿ ಸಂಬಂಧಿಸಿದವರಿಗೆ ದೂರವಾಣಿ ಮೂಲಕ ಸಂಪರ್ಕಿಸಬಹುದಾಗಿದೆ.

ಅ. ನಂ. ಆಸ್ಪತ್ರೆ ಹೆಸರು ಆರೋಗ್ಯ ಮಿತ್ರ ಸಂಪರ್ಕ ಸಂಖ್ಯೆ
೧. ಬಿಎಚ್‌ಎಸ್ ಲೇಕ್‌ವ್ಯೂ ಹಾರ್ಟ್ ಹಾಸ್ಪಿಟಲ್ ಅನೀಸಾಬೇಗಂ ಸೌದಾಗರ್ ೮೭೯೨೬೭೧೪೯೭
೨. ಬಿಎಚ್‌ಎಸ್ ಲೇಕ್‌ವ್ಯೂ ಹಾಸ್ಪಿಟಲ್
೩. ವೆಣುಗ್ರಾಮ್ ಆಸ್ಪತ್ರೆ, ಬೆಳಗಾವಿ ಪ್ರೈ.ಲಿ.
೪. ದಕ್ಷತಾ ಹಾಸ್ಪಿಟಲ್ ಮೂಬಿನ್ ಮುಲ್ಲಾ ೯೦೦೮೪೬೦೦೦೮
೫. ವೆನಸ್ ಮಲ್ಟಿ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್
೬. ಯಶ್ ಹಾಸ್ಪಿಟಲ್
೭. ಲೈಪ್‌ಲೈನ್ ಹಾಸ್ಪಿಟಲ್
೮. ಕೆ.ಎಲ್.ಇ. ಡಾ|| ಪ್ರಭಾಕರ ಕೋರೆ ಆಸ್ಪತ್ರೆ & ಎಂ.ಆರ್.ಸಿ. ರಾಕೇಶ್ ಚಚಡಿ ೮೮೬೭೨೮೮೫೭೩
೯. ಕೆ.ಎಲ್.ಇ. ಡಾ|| ಪ್ರಭಾಕರ ಕೋರೆ ಆಸ್ಪತ್ರೆ & ಎಂ.ಆರ್.ಸಿ. (ಉಚಿತ) ಬಿ.ಜಿ. ಮಕಾನದಾರ ೯೬೨೦೩೬೯೭೮೬
೧೦. ಶ್ರೀ ಸಾಯಿ ಹಾಸ್ಪಿಟಲ್ ಖಾಸಬಾಗ, ಬೆಳಗಾವಿ ಮಂಜುಲಾ ಪಾಟೀಲ ೯೭೪೦೨೨೮೩೨೩
೧೧. ಶ್ರೀ ಓರ್ಥೋ & ಟ್ರಾಮಾ ಸೆಂಟರ್, ಬೆಳಗಾವಿ
೧೨. ಧನ್ವಂತರಿ ಹಾಸ್ಪಿಟಲ್
೧೩. ವಿಜಯ್ ಓರ್ಥೋ & ಟ್ರಾಮಾ ಸೆಂಟರ್, ಬೆಳಗಾವಿ ಗೀತಾ ಮಡಿವಾಳರ ೭೦೧೯೨೮೮೩೧೨
೧೪ ಸ್ಪಂದನ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಅಜಿತ್ ಎಸ್. ಕಾಂಬಳೆ ೮೮೯೨೧೦೨೫೯೫
೧೫. ಅಪೂರ್ವ ಹಾಸ್ಪಿಟಲ್ ರಮೇಶ ರೊಡ್‌ಬಸಣ್ಣವರ ೭೪೮೩೫೫೫೮೫೫
೧೬. ಕಸ್ಬೇಕರ್ ಮೆಟಗುಡ್ಡ ಹಾಸ್ಪಿಟಲ್
೧೭. ಲೈಪ್ ಕೇರ್ ಹಾಸ್ಪಿಟಲ್
೧೮. ನೋಬಲ್ ಚಿಲ್ಡ್ರನ್ಸ್ ಹಾಸ್ಪಿಟಲ್ ಮುಬ್ಬೆನ್‌ಬಾನು iಕಾಂದಾರ್ ೮೮೬೭೩೮೭೧೧೧
೧೯. ಬೆಳಗಾಂ ಚಿಲ್ಡ್ರನ್ ಹಾಸ್ಪಿಟಲ್

ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ –

Press Note – CCC, Covid war Room and ABAK

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button