ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲೆಯಲ್ಲಿ ಭಾನುವಾರ 11 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.
ಈ ಪೈಕಿ ಜಿಲ್ಲಾ ಕೇಂದ್ರ ಬೆಳಗಾವಿ ತಾಲೂಕಿನಲ್ಲಿ 3, ಗೋಕಾಕ ತಾಲೂಕಿನಲ್ಲಿ 3, ಬೈಲಹೊಂಗಲ ತಾಲೂಕಿನಲ್ಲಿ 2, ಸವದತ್ತಿ ತಾಲೂಕಿನಲ್ಲಿ 2 ಹಾಗೂ ಅಥಣಿ ತಾಲೂಕಿನಲ್ಲಿ 1 ಪ್ರಕರಣ ಪತ್ತೆಯಾಗಿದೆ.
ಜಿಲ್ಲೆಯಲ್ಲಿ ಈವರೆಗೆ 2077462 ಜನರ ರಕ್ತದ ಮಾದರಿಗಳನ್ನು ಸಂಗ್ರಹಿಸಿದ್ದು 1971055 ಪ್ರಕರಣಗಳಲ್ಲಿ ನೆಗೆಟಿವ್ ವರದಿ ಬಂದಿದೆ. ಭಾನುವಾರದ 11 ಪ್ರಕರಣಗಳೂ ಸೇರಿ ಪಾಸಿಟೀವ್ ಪ್ರಕರಣಗಳ ಸಂಖ್ಯೆ 100218 ಕ್ಕೇರಿದೆ. ಈವರೆಗೆ 1004 ಜನ ಸೋಂಕಿನಿಂದ ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳಲ್ಲಿ 34 ಜನ ಆಸ್ಪತ್ರೆ ಮತ್ತು ಮನೆಗಳಲ್ಲಿ ಕ್ವಾರಂಟೈನ್ ಆಗಿದ್ದಾರೆ. 99180 ಜನ ಡಿಸ್ಚಾರ್ಜ್ ಆಗಿದ್ದು 826 ರಕ್ತದ ಮಾದರಿಗಳ ವರದಿ ಇನ್ನೂ ಬರಬೇಕಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಖಾನಾಪುರ ತಾಲೂಕಿನಲ್ಲಿ ನಿಸರ್ಗ ಸ್ವರ್ಗ ಸೃಷ್ಟಿಸಿರುವ ಜಲಧಾರೆಗಳು; ಆರಿದ್ರಾ ಮಳೆ ಅರಳಿಸಿದ ಅದ್ಭುತ ಲೋಕ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ