Kannada NewsLatest

ಹುಕ್ಕೇರಿ ಹಿರೇಮಠದಿಂದ ಕೋವಿಡ್ ಕಿಟ್ ವಿತರಣೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ದೇಶದಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸದಿಂದ ದೀನೆ ದೀನೆ ಜನರು ಭಯಭೀತರಾಗಿದ್ದಾರೆ ಇಂತಹ ಸಂದರ್ಭದಲ್ಲಿ ಜನರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಹುಕ್ಕೇರಿ ಹಿರೇಮಠದವತಿಯಿಂದ ಕೋವಿಡ್ ಕಿಟ್ ವಿತರಿಸಲಾಗುತ್ತಿದೆ.

ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಎಮ್ ಜಿ ಹಿರೇಮಠ ಅವರಿಗೆ 150 ಕೋವಿಡ್ ಕಿಟ್ ಗಳನ್ನು ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ನೀಡಿದರು.

ಜಿಲ್ಲೆಯಲ್ಲಿ 1000 ಕೋವಿಡ್ ಕಿಟ್ ನೀಡುವುದಾಗಿ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು. ಇದೇ ವೇಳೆ ಹುಕ್ಕೇರಿ ಹಿರೇಮಠದ ಶ್ರೀ ಗುರುಶಾಂತೇಶ್ವರ ಜಾತ್ರೆಯನ್ನು ರದ್ದು ಮಾಡಿ ಶ್ರೀ ಮಠದಿಂದ ಕೋವಿಡ್ ರೋಗಿಗಳಿಗೆ ಉಚಿತ ಅಂಬುಲೆನ್ಸ ನೀಡುವುದಾಗಿ ಹೇಳಿದರು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಎಮ್ ಜಿ ಹಿರೇಮಠ ಹುಕ್ಕೇರಿ ಹಿರೇಮಠದ ಶ್ರೀ ಗಳು ಸದಾ ಸಾಮಾಜಿಕ ಕಾರ್ಯವನ್ನು ಮಾಡುವುದರ ಜೊತೆಗೆ ಕೋವಿಡ್ ಸಂದರ್ಭದಲ್ಲಿ ಕೋವಿಡ್ ಕಿಟ್ ನ್ನು ನೀಡಿ ಜನರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನ ಮಾಡುತ್ತಿದ್ದಾರೆ ಎಂದು ಹೇಳಿದರು.

Home add -Advt

ಈ ಸಂದರ್ಭದಲ್ಲಿ ವೀರೆಶ ಹಿರೇಮಠ, ಪವನ ಹಿರೇಮಠ , ಈರಣ್ಣ ಗಣಾಚಾರಿ, ಮಹಾಂತೇಶ ಹಿರೇಮಠ ಉಪಸ್ಥಿತರಿದ್ದರು.

ರೆಮ್ ಡಿಸಿವಿರ್ ಇಂಜಕ್ಷನ್ ಹೆಸರಲ್ಲಿ ವಂಚನೆ; ಸಾರ್ವಜನಿಕರಿಗೆ ಇರಲಿ ಎಚ್ಚರ..!

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button