ಪ್ರಗತಿವಾಹಿನಿ ಸುದ್ದಿ; ತಿರುವನಂತಪುರಂ: ದೇಶದಲ್ಲಿ ಮತ್ತೆ ಮಹಾಮಾರಿ ಕೋವಿಡ್ ಆತಂಕ ಶುರುವಾಗಿದೆ. ಕೇರಳದ ಮಹಿಳೆಯೊಬ್ಬರಲ್ಲಿ ಕೋವಿಡ್ ಉಪತಳಿ ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಕೊರೊನಾ ಸೋಂಕು ರಾಜ್ಯಕ್ಕೂ ಹರಡುವ ಭೀತಿ ಎದುರಾಗಿದೆ.
ಕೇರಳದ ಮಹಿಳೆಯೊಬ್ಬರಿಗೆ ಆರ್ ಟಿಪಿಸಿ ಆರ್ ಟೆಸ್ಟ್ ಮಾಡಿದಾಗ ಹೊಸ ತಳಿ JN.1 ವೈರಸ್ ಪತ್ತೆಯಾಗಿದೆ. ಇನ್ ಫ್ಲುಯೆಂನ್ಜಾ ಸೌಮ್ಯ ಲಕ್ಷಣಗಳು ಮಹಿಳೆಯಲ್ಲಿ ಕಂಡುಬಂದಿದೆ. ಕೇರಳದಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿವೆ.
ಇತ್ತು ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಅ ಪ್ರಯಾಣಿಕರೊಬ್ಬರಲ್ಲಿ ಸಿಂಗಾಪುರದಲ್ಲಿ ಈ ತಳಿ ಪತ್ತೆಯಾಗಿತ್ತು. ಇನ್ನೊಂದೆಡೆ ಈಗಾಗಲೇ ಆಗ್ನೇಯ ಏಷ್ಯಾದಲ್ಲಿ ಕೋವಿಡ್ ಪ್ರಕರಣ ಹೆಚ್ಚಳವಾಗಿದೆ. ಈ ಹಿಲೆಯಲ್ಲಿ ರಾಜ್ಯದಲ್ಲಿಯೂ ಮುಂಜಾಗೃತಾ ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನು ದೇಶದಲ್ಲಿ ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಜ್ಞರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಮೂಗು ಕಟ್ಟುವಿಕೆ, ಜ್ವರ, ಕೆಮ್ಮು, ಸುಸ್ತು, ಅತಿಸಾರ, ತಲೆನೋವು, ಸದಾ ಸ್ರವಿಸುವ ಮೂಗು ಇದು JN.1 ಹೊಸ ಸೋಂಕಿನ ಲಕ್ಷಣಗಳಾಗಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ