Latest

ಪಟಾಕಿ ಸಿಡಿದು ಬಾಲಕನ ಕಣ್ಣಿಗೆ ಗಂಭೀರ ಗಾಯ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪಟಾಕಿ ಹೊಡೆಯುವ ವೇಳೆ ಬಾಲಕನ ಕಣ್ಣಿಗೆ ಪಟಾಕಿ ಸಿಡಿದು ಕಣ್ಣಿನ ಗುಡ್ಡೆಗೆ ಗಾಯವಾಗಿರುವ ಘಟನೆ ಬೆಂಗಳೂರಿನ ವಿಜಯಾನಂದ ನಗರದಲ್ಲಿ ನಡೆದಿದೆ.

12 ವರ್ಷದ ಬಾಲಕ ಪಟಾಕಿ ಸಿಡಿದು ಗಂಭೀರವಾಗಿ ಗಾಯಗೊಂಡಿದ್ದಾನೆ. ದೀಪಾವಳಿ ಸಂಭ್ರಮದಲ್ಲಿ ಹೂವಿನಕುಂಡ ಪಟಾಕಿ ಹೊಡೆಯುತ್ತಿರುವುದನ್ನು ನೋಡಲು ಬಾಲಕ ಹೋಗಿದ್ದ. ಈ ವೇಳೆ ವೇಳೆ ಪಟಾಕಿ ಕಿಡಿ ಬಾಲಕನ ಕಣ್ಣಿಗೆ ತಗುಲಿದೆ.

ಬಾಲಕನನ್ನು ಮಿಂಟೋ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಕಣ್ಣಿನ ಗುಡ್ಡೆಗೆ ಗಾಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button