ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ತಮ್ಮ ಅಂಗಡಿಯಲ್ಲಿ ಕೆಲಸ ಮಾಡುವ ಬಡ ಉದ್ಯೋಗಿಗಳ ಪ್ರತಿಭಾವಂತ ಮಕ್ಕಳನ್ನು ಕ್ರೀಸ್ ವೈಸ್ ಮಾಲಿಕ ಕೃಷ್ಣ ಭಟ್ ಗೌರವಿಸಿ, ಆರ್ಥಿಕ ಸಹಾಯ ನೀಡಿದರು.
ಕಳೆದ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ತಮ್ಮ ಅಂಗಡಿಯಲ್ಲಿ ಉದ್ಯೋಗ ಮಾಡುವವರ ಮಕ್ಕಳನ್ನು ಕರೆಸಿ ಆರ್ಥಿಕ ಸಹಾಯ ಮಾಡಿ ಸನ್ಮಾನಿಸಿದ ವಿಶ್ವಹಿಂದೂ ಪರಿಷತ್ ಕಾರ್ಯಕರ್ತರಾಗಿರುವ ಕ್ರೀಸ್ ವೈಸ್ ಮಾಲಕ ಕೃಷ್ಣ ಭಟ್ಟ ಕುಟುಂಬದವರು, ಈ ಪರಂಪರೆ ಮುಂದುವರಿಯಲಿದೆ ಎಂದು ಘೋಷಿಸಿದರು.
ಶೇ.98ರಷ್ಟು ಅಂಕಗಳಿಸಿರುವ ಮಹಿಳಾ ವಿದ್ಯಾಲಯದ ವಿದ್ಯಾರ್ಥಿನಿ ಪ್ರತಿಕ್ಷಾ ವಿಶ್ವೇಶ್ವರ ಹೆಗಡೆ, ಶೇ.92ರಷ್ಟು ಅಂಕಗಳಿಸಿರುವ ಕರ್ಮವೀರ ಬಾವುರಾವ್ ವಿದ್ಯಾಪೀಠದ ಪಾಯಲ್ ಜಿ ವಾಸುದೇವ ಮತ್ತು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿರುವ ಸಹೇಲಿ ಜಿ ಪೋಟೆ , ಹರೀಶ ಆರ್ ಇಂಗಳೆ ಮೊದಲಾದವರನ್ನು ಸನ್ಮಾನಿಸಿ, ಸಹಾಯಧನ ನೀಡಿ ಪ್ರೋತ್ಸಾಹಿಸಿದರು. ಅಲ್ಲದೆ ಉನ್ನತ ಶಿಕ್ಷಣ ಪಡೆಯುವ ಕೆಲಸಗಾರರ ಮಕ್ಕಳಿಗೆ ಹೆಚ್ಚಿನ ಆರ್ಥಿಕ ಸಹಾಯ ಮಾಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕೃಷ್ಣ ಭಟ್ಟ, ಪಂಕಜಾ ಭಟ್ಟ, ಆನಂದ ಲಾಡ್, ವಿನಾಯಕ ಭಟ್ಟ, ದೀಪಾ ಭಟ್ಟ ಮತ್ತು ಅಂಗಡಿಯ ಕೆಲಸಗಾರರೆಲ್ಲರೂ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಶಿಕ್ಷಕ ಅನಂತ ಲಾಡ್, ಕೃಷ್ಣ ಭಟ್ಟ ಕುಟುಂಬದ ಕಾರ್ಯವನ್ನು ಶ್ಲಾಘಿಸಿ, 2004 ರಿಂದಲೂ ಟೇಲರಿಂಗ್ ಕೆಲಸಗಾರರಿಗೆ ಸರಕಾರದ ಸವಲತ್ತುಗಳನ್ನು ಕೊಡಿಸಲು ಟೇಲರಿಂಗ್ ಅಸೋಸಿಯೇಷನ್ ಮೂಲಕ ಶ್ರಮಿಸುತ್ತಿದ್ದಾರೆಂದು ಹೇಳಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ವಾಣಿ ರಮೇಶ ಸ್ವಾಗತ ಗೀತೆ ಹಾಡಿದರು.
ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಲಿರುವ ಪ್ರಧಾನಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ