*ದಸರಾ ರೀಲ್ಸ್ ಮಾಡಿ ಬಹುಮಾನ ಗೆಲ್ಲಿ*: *ಟಾಪ್ 100 ರೀಲ್ಸ್ಗೆ ಡಿಕೆಶಿ ವಿಶೇಷ ಆಫರ್!*

ಪ್ರಗತಿವಾಹಿನಿ ಸುದ್ದಿ: ಮೈಸೂರು ದಸರಾ ಸಂಭ್ರಮವನ್ನು ರೀಲ್ಸ್ ಮೂಲಕ ಹಂಚಿಕೊಳ್ಳುವ ಯುವಜನರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಶೇಷ ಬಹುಮಾನದ ಆಫರ್ ಘೋಷಿಸಿದ್ದಾರೆ. ದಸರಾ ದೀಪಾಲಂಕಾರ, ಜಂಬೂಸವಾರಿ, ಆಹಾರ ಮೇಳ ಸೇರಿದಂತೆ ಹಬ್ಬದ ಯಾವುದೇ ಸಂಭ್ರಮದ ಕುರಿತು ರೀಲ್ಸ್ ಮಾಡಿ ಕಳುಹಿಸಿ. ಉತ್ತಮವಾದ 100 ರೀಲ್ಸ್ ಆಯ್ಕೆ ಮಾಡಿ ಬಹುಮಾನ ನೀಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ಮೈಸೂರಿನಲ್ಲಿ ದಸರಾ ಕಂಬಳ ಓಟಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಈ ಘೋಷಣೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಯುವಕ-ಯುವತಿಯರು ದಸರಾ ಮಹೋತ್ಸವದ ವೈಭವವನ್ನು ಸೃಜನಶೀಲ ರೀತಿಯಲ್ಲಿ ಸೆರೆಹಿಡಿದು ಹಂಚಿಕೊಳ್ಳುವಂತೆ ಆಹ್ವಾನಿಸಿದ್ದಾರೆ.
ದಸರಾ ದೀಪಾಲಂಕಾರದ ಸೌಂದರ್ಯವಾಗಲಿ, ಜಂಬೂಸವಾರಿಯ ವೈಭವವಾಗಲಿ, ಆಹಾರ ಮೇಳದ ವಿಶೇಷತೆಗಳಾಗಲಿ ಅಥವಾ ಹಬ್ಬದ ಇತರ ಆಕರ್ಷಣೆಗಳಾಗಲಿ, ಯಾವುದೇ ವಿಷಯದ ಕುರಿತು ರೀಲ್ಸ್ ಕಳುಹಿಸಬಹುದು. ಅವುಗಳಲ್ಲಿ ಅತ್ಯುತ್ತಮ 100 ರೀಲ್ಸ್ಗಳನ್ನು ಆಯ್ಕೆ ಮಾಡಿ ಬಹುಮಾನ ನೀಡಲಾಗುತ್ತದೆ ಎಂದು ಸಿಎಂ ಘೋಷಿಸಿದ್ದಾರೆ.
ಈ ಮೂಲಕ ಮೈಸೂರು ದಸರಾವನ್ನು ಸಾಮಾಜಿಕ ಜಾಲತಾಣಗಳಲ್ಲಿಯೂ ಮತ್ತಷ್ಟು ಜನಪ್ರಿಯಗೊಳಿಸಲು ಯುವಜನರಿಗೆ ಅವಕಾಶ ಸಿಕ್ಕಿದೆ. ದಸರಾ ಸಂಭ್ರಮವನ್ನು ತಮ್ಮದೇ ಶೈಲಿಯಲ್ಲಿ ಚಿತ್ರೀಕರಿಸಿ, ಸೃಜನಶೀಲತೆಗೆ ಬಹುಮಾನ ಗೆಲ್ಲುವ ಅವಕಾಶವನ್ನು ರೀಲ್ಸ್ ಪ್ರಿಯರು ಬಳಸಿಕೊಳ್ಳಬಹುದಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




