Latest

*ಮಿಶ್ರ ಅನುಭವ ನೀಡಿದ”ಕ್ರಿಯೇಟಿವ್ ಕಾಂಟೋರ್ಸ”ಚಿತ್ರ ಕಲಾ ಪ್ರದರ್ಶನ*

ಪ್ರಗತಿವಾಹಿನಿ ಸುದ್ದಿ; ದಾವಣಗೆರೆ: ಕಲಬುರಗಿಯ ಚಿತ್ರ ಕಲಾವಿದ ರಾಮಗಿರಿ ಪೊಲೀಸ್ ಪಾಟೀಲ್ ರವರ ಸಂಯೋಜನೆ-ಸಂಚಾಲಕತ್ವದಲ್ಲಿ ಕಳೆದ9,10,11-2-2023 ರವರೆಗೆ ದಾವಣಗೆರೆಯ ದೃಶ್ಯ ವಿಶ್ವ ಕಲಾಗ್ಯಾಲರಿಯಲ್ಲಿ ಕಲಬುರಗಿ ಕಲಾವಿದರ ಗುಂಪಿನಿಂದ “ಕ್ರಿಯೇಟಿವ್ ಕಾಂಟೋರ್ಸ”ಶೀರ್ಷಿಕೆ ಅಡಿ ಸಮೂಹ ಕಲಾ ಪ್ರದರ್ಶನ ನಡೆಯಿತು.

ಇದರಲ್ಲಿ ಅಶೋಕ ಚಿತ್ಕೋಟಿ, ಬಿ.ಎನ್. ಪಾಟೀಲ್, ಭಾಗ್ಯ ಶ್ರೀ ಕುಲಕರ್ಣಿ, ಗಾಯತ್ರಿ ಕುಲಕರ್ಣಿ, ನಂದಿನಿ ಮುಸಿಗಿ,ಕೆ.ಎಸ್. ಕಾಮತಗೌಡರ್, ರಾಮಗಿರಿ ಪೋಲೀಸ್ ಪಾಟೀಲ್, ಸೂರ್ಯ ಕಾಂತ ನಂದೂರ,ಅಶ್ವಿನಿ ಭರತ್ ಗೋಮತಂ, ಜನನಿ ಮನೋಹರ್, ಪ್ರಮೀಳಾ ನಿಟ್ಟೂರ,ಶಿವಲೀಲಾ ಉಪ್ಪಿನ, ರೇಖಾ ಟೋಲೆ,ಉಮಾ ಮಠಪತಿ, ಮೀನಾಕ್ಷಿ ಗುತ್ತೇದಾರ್,ಲಕ್ಷ್ಮಿ ಹಿರೇಮಠ, ವಿವೇಕ ಕಟ್ಟೀಮಠ,ಸಂಜಯ ಕನಿಹಾಳ್ ಇವರುಗಳು ರಚಿಸಿದ ಕಲಾಕೃತಿಗಳು ಪ್ರದರ್ಶನದಲ್ಲಿದ್ದವು. ಒಟ್ಟು 32ಚಿತ್ರಗಳು ಇರಿಸಲ್ಪಟ್ಟಿದ್ದವು.

ಈ ಎಲ್ಲಾ ಕಲಾಕೃತಿಗಳ ಪೈಕಿ ಅಶೋಕ ಚಿತ್ಕೋಟಿ, ವಿವೇಕ ಕಟ್ಟಿಮನಿ, ಬಿ.ಎನ್. ಪಾಟೀಲ್, ನಂದಿನಿ ಮಸಿಗಿ,ಕಾಮತಗೌಡರ್, ರೇಖಾ ಟೋಲೆ,ಸೂರ್ಯಕಾಂತ ನಂದೂರ,ರಾಮಗಿರಿ ಪೋಲಿಸ್ ಪಾಟೀಲ್ ಇವರುಗಳ ಕಲಾಕೃತಿಗಳು ಕಲಾತ್ಮಕ ಗುಣಮಟ್ಟದ ದೃಷ್ಟಿಯಿಂದ ಕಲಾವಲಯದಲ್ಲಿ ತೊಡಗಿಕೊಂಡಿರುವ & ನಿರಂತರ ಕಲಾ ಪರಿವರ್ತನೆ ಗಮನಿಸುತ್ತಿರುವ ‘ಗಂಭೀರ ವರ್ಗ’ದವರ ಗಮನ ಸೆಳೆಯುವಂತಿದ್ದವು. ಗಾಂಧೀಜಿ, ಅಂಬೇಡ್ಕರ್ ರವರಂತಹ ಮಹಾನ್ ವ್ಯಕ್ತಿತ್ವಗಳಿಗೆ ಸಮಾಜ ಗೌರವಿಸುವ ‘ಕೇವಲ ಔಪಚಾರಿಕತೆ’ಯ ಕುರಿತಾಗಿ ಕಲಾವಿದರು ಅಭಿವ್ಯಕ್ತಿಸಿದ ಪರಿ ಬಹಳ ಸಾಂಕೇತಿಕ ಸ್ವರೂಪವೂ ,ಸಮಕಾಲೀನ ಕಲಾ ಜಾಡಿಗೆ ಅನುಗುಣವೂ ಆದುದು. ಈ ಚಿತ್ರಗಳಲ್ಲಿ ಕಲಾವಿದರು ಈ ಎರಡೂ ಮಹೋನ್ನತ ವ್ಯಕ್ತಿಗಳ ಕುತ್ತಿಗೆಯಿಂದ ಎದೆಯಮಟ್ಟದವರೆಗೆ ನೈಜಶೈಲಿಯಲ್ಲಿ (ಅವರುಗಳ ಜನಪ್ರಿಯ ಭಾವಚಿತ್ರಗಳಲ್ಲಿ ಇರುವಂತೆ)ರಚಿಸಿ, ಮುಖವನ್ನು ಚಿತ್ರಿಸದೇ ಖಾಲಿಯಾಗಿ ಇರಿಸಿದ್ದಾರೆ ಮತ್ತು ಆ ಎರಡೂ ಚಿತ್ರಗಳಿಗೂ ಮಾಲೆ ತೂಗುಹಾಕಿದ್ದಾರೆ. ಬಹುಅರ್ಥ ಕಲ್ಪಿಸುವ ಈ ಕಲಾಕೃತಿ ಇಡೀ ಪ್ರದರ್ಶನದ ಅನನ್ಯ ಕೃತಿಯಾಗಿ ತೋರ್ಪಡಯಾಯಿತೆನ್ನಬಹುದು.

ಕೆ.ಕಾಮತಗೌಡರ್ರವರ ನಿಸರ್ಗ ಚಿತ್ರಗಳು ಕೂಡ ಕಲಾರಸಿಕರ ಮನಕ್ಕೆ ಮುದನೀಡುವಲ್ಲಿ ಯಶಸ್ವಿಯಾದವು.ಸುಮಾರು 80/90ರ ದಶಕ ಅವಧಿಯಲ್ಲಿ ದೃಶ್ಯ ಕಲಾಶಾಲೆಗಳ ಕಲಾಧ್ಯಾಪಕರುಗಳು ಅನುಸರಿಸುತ್ತಿದ್ದ ನಿಸರ್ಗ ಚಿತ್ರಣ ತಂತ್ರ ಇವರ ಕೃತಿಗಳಲ್ಲಿ ಅನುಕರಿಸಲ್ಪಟ್ಟಿದ್ದು/ಅನುಸರಿಸಲ್ಪಟ್ಟಿದ್ದು ಕಣ್ಣಿಗೆ ಢಾಳಾಗಿ ಗೋಚರಿಸುವ ಅಂಶ.ವಿವೇಕ ಕಟ್ಟೀಮಠರ ಅಮೂರ್ತ ಕಲಾಕೃತಿಗಳು ಅವುಗಳಲ್ಲಿನ ವರ್ಣ ಸಮತೋಲನ, ಸೌಮ್ಯ ದೃಗ್ಗೋಚರತ್ವ ಅಂಶಗಳಿಂದಾಗಿ ಗಮನ ಸೆಳೆದವು.

Home add -Advt

ನಂದಿನಿ ಪಿ.ಮಸಿಗಿಯವರ ರೇಖಾಚಿತ್ರ ಸ್ತ್ರೀಯರ ಅಂತರಂಗ ತುಮುಲ,ಕಳವಳ,ಏಲಿಯನ್ಗಳ ಲೋಕ ಚಿತ್ರಣ ದಂತಹ ವಿಷಯ ನಿರೂಪಣೆ &ರೇಖಾಚಿತ್ರಗಳಲ್ಲಿನ ಶ್ರಮಪೂರ್ವಕ ಆಳ,ಮಧ್ಯಮ, ಲಘುತ್ವ ಪರಿಣಾಮ ತೋರ್ಪಡಿಕೆಯಿಂದಾಗಿ ಕಲಾಸಕ್ತರ,ಕಲಾವಿದರ ಗಮನ ಸೆಳೆದವು.ಅಶೋಕ ಚಿತ್ಕೋಟಿಯವರ ರೇಖಾಚಿತ್ರಗಳಲ್ಲಿನ ಶೇಡಿಂಗ್ & ಚಿಕಣಿಚಿತ್ರಾತ್ಮಕತೆ ವಿಶೇಷತರವಾದುದಾಗಿತ್ತು.ಬಿ.ಎನ್. ಪಾಟೀಲ್ ರವರ ಕೃತಿಗಳಲ್ಲಿನ ಸಂಯೋಜನಾ ವೈಖರಿ, ಕಣ್ಣಿಗೆ ಬಹಳ ಹಿತಕರವೆನಿಸುವ ವರ್ಣಸಾಂಗತ್ಯ & ಅವುಗಳಲ್ಲಿ ತೋರ್ಪಡಿಸಿದ ಸೂಕ್ಷ್ಮ ಏರಿಳಿತ, ಬಹಳ ಸಮರಸಪೂರ್ಣವಾಗಿ ವರ್ಣಗಳನ್ನು ಸಮ್ಮಿಲನಗೊಳಿಸುವಿಕೆ ಆಕರ್ಷಿಸಿದವು.ಉಳಿದ ಬಹುತೇಕ ಕಲಾಕೃತಿಗಳು ಸಮಾನ್ಯ ಮಟ್ಟದಲ್ಲಿ ನಿಲ್ಲುವವುಗಳು.ಅವುಗಳಲ್ಲಿ ಕೌಶಲ್ಯ ಇತ್ತಾದರೂ ಸಮಕಾಲೀನವಾಗಿ ಅಭಿವ್ಯಕ್ತಿಗೊಳ್ಳುವಲ್ಲಿ,ಕಲಾ ಜಗತ್ತಿನಲ್ಲಿ ಗಟ್ಟಿಯಾಗಿ ನಿಲ್ಲಬಲ್ಲ ಕಲಾಮೌಲ್ಯಗಳನ್ನು ಅಳವಡಿಸಿಕೊಳ್ಳುವಲ್ಲಿ ವಿಫಲವಾಗಿದ್ದು ಕಂಡು ಬಂದಿತು.

ಲೇಖನ—-ದತ್ತಾತ್ರೇಯ ಎನ್. ಭಟ್ಟ, ಕಲಾವಿಮರ್ಶಕ, ದಾವಣಗೆರೆ.

*ಧುರ್ಯೋಧನ ಯಾರೆಂದು ಗೊತ್ತಿಲ್ಲ, ನಾನಂತು ಅರ್ಜುನ; ಸಿ.ಟಿ ರವಿಗೆ ತಿರುಗೇಟು ನೀಡಿದ ಶಾಸಕ ಶಿವಲಿಂಗೇಗೌಡ*

https://pragati.taskdun.com/c-t-ravimla-shivalingegowdavidhanasabhe/

Related Articles

Back to top button