Latest

ಕ್ರಿಕೆಟ್ ಬೆಟ್ಟಿಂಗ್; ಆರು ಜನರ ಬಂಧನ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಐಪಿಎಲ್ ಪಂದ್ಯ ಆರಂಭವಾಗುತ್ತಿದ್ದಂತೆಯೇ ಕ್ರಿಕೆಟ್ ಬೆಟ್ಟಿಂಗ್ ಕೂಡ ಜೋರಾಗಿ ನಡೆಯುತ್ತಿದೆ. ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಆರು ಜನರನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದು, 7.50ಲಕ್ಷ. ರೂ‌.ನಗದು ವಶಪಡಿಸಿಕೊಂಡಿದ್ದಾರೆ.

ನಗರ್ತ ಪೇಟೆಯ ರಾಣಾ(36), ಚೇತನ್(20), ಇಮ್ರಾನ್ ಬಾಷಾ(25), ಮಹಮ್ಮದ್ ಇರ್ಫಾನ್, ಮುಜಾಮಿಲ್ ಮಹಮ್ಮದ್, ರೋಮೆನ್ ಬಂಧಿತ ಆರೋಪಿಗಳು.

ಬೆಂಗಳೂರಿನ ನಗರ್ತಪೇಟೆಯ ಪಿ.ಎಂ.ಎಂಟರ್ ಪ್ರೈಸಿಸ್ ನಲ್ಲಿ ಆರೋಪಿಗಳಿಬ್ಬರು ಜನರಿಂದ ಹಣ ಕಟ್ಟಿಸಿಕೊಂಡು ಜೂಜಾಟ ನಡೆಸುತ್ತಿದ್ದರು. ಈ ವೇಳೆಪೊಲೀಸರು ಬಂಧಿಸಿದ್ದಾರೆ. ಇವರಿಂದ 4,50,800 ರೂ.ನಗದು, 2 ಮೊಬೈಲ್ ವಶಪಡಿಸಿಕೊಂಡಿದ್ದಾರೆ.

ಇದೇ ವೇಳೆ ಯಶವಂತಪುರ ಆರ್ ಟಿಒ ಕಚೇರಿ ಎದುರು ಚೆನ್ನೈ, ಕೊಲ್ಕತ್ತಾ ತಂಡಗಳ ನಡುವೆ ಬೆಟ್ಟಿಂಗ್ ಕಟ್ಟಿ ಜನರಿಂದ ಹಣ ಕಟ್ಟಿಸಿಕೊಂಡು ಗೆದ್ದವರಿಗೆ ಹಣ ಕೊಡುತ್ತಿರುವಾಗ ನಲವರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಇವರಿಂದ 3 ಲಕ್ಷ ರೂ. ನಗದು, 4 ಮೊಬೈಲ್ ವಶಪಡಿಸಿಕೊಂಡಿದ್ದಾರೆ.

Home add -Advt

Related Articles

Back to top button