Latest

ಮಾಜಿ ಕ್ರಿಕೆಟರ್ ತಂದೆಯ ಕಾರನ್ನೇ ಕದ್ದೊಯ್ದ ಕಳ್ಳರು

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಮಾಜಿ ಕ್ರಿಕೆಟರ್, ಬಿಜೆಪಿ ಸಂಸದ ಗೌತಮ್ ಗಂಭೀರ್ ತಂದೆ ದೀಪಕ್ ಗಂಭೀರ್ ಅವರ ಕಾರು ಕಳ್ಳತನವಾಗಿದೆ. ಮನೆಯ ಮುಂದೆ ನಿಲ್ಲಿಸಿದ್ದ ಎಸ್ ಯುವಿ ಕಾರನ್ನು ಕಳ್ಳರು ಕದ್ದೊಯ್ದಿದ್ದಾರೆ.

ಬಿಳಿ ಬಣ್ಣದ ಟೊಯೋಟಾ ಫಾರ್ಚೂನ್ ಕಾರನ್ನು ದೀಪಕ್ ಗಂಭೀರ್ ದೆಹಲಿಯ ರಾಜೇಂದ್ರ ನಗರ ಮನೆ ಹೊರಗಡೆ ನಿಲ್ಲಿಸಿದ್ದರು. ಇಂದು ಮುಂಜಾನೆ ದುಷ್ಕರ್ಮಿಗಳು ಕಾರನ್ನು ಕದ್ದೊಯ್ದಿದ್ದಾರೆ.

Home add -Advt

ಈ ಕುರಿತು ಮಾತನಾಡಿರುವ ದೆಹಲಿ ಸೆಂಟ್ರಲ್ ಡಿಸಿಪಿ ಸಂಜಯ್ ಭಾಟಿಯಾ, ಗಂಭೀರ್ ಮನೆ ಹೊರಗೆ ನಿಲ್ಲಿಸಿದ್ದ ಫೋರ್ಚುನರ್ ಕಾರು ಕಳವಾಗಿರುವ ಮಾಹಿತಿ ಲಭಿಸಿದೆ. ಈಗಾಗಲೇ ಎಫ್‌ಐಆರ್ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ. ನಾವೂ ಸಹ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ತನಿಖೆ ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ.

ಈಗಾಗಲೇ ಗಂಭೀರ್ ತಂದೆ ರಾಜೇಂದ್ರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಸಿಸಿಟಿವಿ ಕ್ಯಾಮರಾ ಪರಿಶೀಲನೆ ನಡೆಸಲಾಗುತ್ತಿದ್ದು, ಆರೋಪಿ ಪತೆಗೆ ಬಲೆ ಬೀಸಲಾಗಿದೆ ಎಂದು ತಿಳಿಸಿದ್ದಾರೆ.

Related Articles

Back to top button