World Environment Day

ಬೆಳಗಾವಿ ಯೋಧ ಹುತಾತ್ಮ

ಜಮ್ಮುವಿನಲ್ಲಿ ಉಗ್ರರ ಗುಂಡಿಗೆ ಜೀವತೆತ್ತ ರಾಹುಲ್ ಸುಳಗೇಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಜಮ್ಮು-ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಬೆಳಗಾವಿ ಮೂಲದ ಯೋಧ ಬಲಿಯಾಗಿದ್ದಾನೆ.

ಬೆಳಗಾವಿ ಉಚಗಾವಿಯ ರಾಹುಲ್ ಭೈರು ಸುಳಗೇಕರ್ (24) ಮೃತನಾದ ಯೋಧ. ಇಂದು ಬೆಳಗಿನ ಜಾವ ಈ ಘಟನೆ ನಡೆದಿದೆ. ರಾಹುಲ್ ಬೆಳಗಾವಿಯ ಮರಾಠಾ ಲೈಟ್ ಇನ್ಫೆಂಟ್ರಿ ರೆಜಿಮೆಂಟ್ ನಲ್ಲಿ ತರಬೇತಿ ಪಡೆದು ಜಮ್ಮುವಿನಲ್ಲಿ ಸೇವೆ ಸಲ್ಲಿಸುತ್ತಿದ್ದ.

ರಾಹುಲ್ ಮೃತನಾಗಿರುವ ವಿಷಯವನ್ನು ಕುಟುಂಬದವರಿಗೆ ತಿಳಿಸಲಾಗಿದ್ದು, ಇಂದು ರಾತ್ರಿಮೃತದೇಹ ಆಗಮಿಸುವ ನಿರೀಕ್ಷೆ ಇದೆ. ರಾಹುಲ್ ತಂದೆ ಸಹ ಸೈನಿಕರಾಗಿ ನಿವೃತ್ತಾರಗಿದ್ದಾರೆ. ಸಹೋದರನೂ ಸೈನ್ಯದಲ್ಲಿದ್ದಾನೆ.