World Environment Day

ಮದ್ಯ ಸೇವಿಸಿದ, ಅಲ್ಲೇ ಬಿದ್ದು ಸತ್ತ

ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ

ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ;  ಪಟ್ಟಣದ ಎಮ್‌ಎಸ್‌ಐಎಲ್ ಸರಾಯಿ ಅಂಗಡಿ ಮುಂದೆ ಮದ್ಯಪಾನ ಮಾಡಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ.
ತಾಲೂಕಿನ ಮದಿಹಳ್ಳಿ ಗ್ರಾಮದ ಪ್ರಮೋದ ಕುಮಾರ ನಾಯಿಕ (೪೬)   ಎಮ್‌ಎಸ್‌ಐಎಲ್ ಸರಾಯಿ ಅಂಗಡಿಯಿಂದ ಮದ್ಯಪಾನ ಮಾಡಿ ಮೂರ್ಚೆಹೋಗಿ ಕುಸಿದು ಬಿದ್ದು ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಮದ್ಯಪಾನ ಮಾಡಿದ ವ್ಯಕ್ತಿ ಮೂರ್ಚೆಹೋಗಿ ಬಿದ್ದರೂ ಕೂಡ ಅಂಗಡಿ ಮಾಲಿಕನು ನೋಡಿದರೂ ಕೂಡ ಆತನ ಸಹಾಯಕ್ಕೆ ಬಾರದೆ ನಿರ್ಲಕ್ಷ್ಯ ವಹಿಸಿದ ಪರಿಣಾಮವಾಗಿ ಆತನು ಮೃಪಟ್ಟಿದ್ದಾನೆ ಎಂದು ಸಾರ್ವಜನಿಕರು ದೂರಿದ್ದಾರೆ. ಹುಕ್ಕೇರಿ ಪೋಲಿಸ್ ಠಾಣೆಯಲ್ಲಿ ಪ್ರಕಣ ದಾಖಲಾಗಿದೆ.

ಗಾಂಜಾ ಮಾರಾಟ: ಬಂಧನ

ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ.
ಶೀತಲ ಮಾದೇವ ಸಂಜುಗೋಳ (೩೫) ಇತನನ್ನು ಬಂಧಿಸಿ ೨೦ ಸಾವಿರ ರೂ. ಗಾಂಜಾ ವಶಪಡಿಕೊಂಡಿದ್ದಾರೆ.