Reporter wanted
Crease wise New Design

ಗೋಕಾಕ ಫಾಲ್ಸ್ ಬಳಿ ನವಜಾತ ಗಂಡು ಶಿಶು ಪತ್ತೆ

ಮಕ್ಕಳ ಪಾಲಕರಿದ್ದಲ್ಲಿ ಸಂಪರ್ಕಿಸಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ  : ಗೋಕಾಕ್ ಫಾಲ್ಸ್ ಬಳಿ ನವಜಾತ ಗಂಡು ಶಿಸುವೊಂದು ಪತ್ತೆಯಾಗಿದೆ.

ಗೋಕಾಕ ಫಾಲ್ಸ್ ಸಮೀಪದ ರಸ್ತೆ ಪಕ್ಕದಲ್ಲಿ ಅಂದಾಜು 3 ದಿನದ ನವಜಾತ ಗಂಡು ಶಿಶುವನ್ನು ಬಿಟ್ಟು ಹೋಗಲಾಗಿದೆ. ನವ್ಹೆಂಬರ್ 26 ರಂದು, ಗುರುವಾರ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಶಿಶು ಪತ್ತೆಯಾಗಿದೆ.
ಶಿಶುವನ್ನು ಸ್ಥಳಿಯ ಸಂಚಾರಿ ಆರೋಗ್ಯ ಘಟಕದ ಸಿಬ್ಬಂದಿ ರಕ್ಷಣೆ ಮಾಡಿ ಬೆಳಗಾವಿಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಹಸ್ತಾಂತರಿಸಿದ್ದಾರೆ. ಮಗುವಿನ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಹಾಗೂ ಮಕ್ಕಳ ಸಹಾಯವಾಣಿ ಸಿಬ್ಬಂದಿ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿದ್ದು ಸದ್ಯ ಶಿಶು ಚಿಕಿತ್ಸೆ ಪಡೆಯುತ್ತಿದೆ.
ಮಗುವಿನ  ಪಾಲಕರು ಇದ್ದಲ್ಲಿ ದೂರವಾಣಿ ಸಂಖ್ಯೆ ೦೮೩೧-೨೪೭೪೧೧೧ ಯನ್ನು ಸಂಪರ್ಕಿಸಬೇಕೆಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರವೀಂದ್ರ ರತ್ನಾಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.