ತಂದೆಯನ್ನೇ ತುಂಡು ತುಂಡಾಗಿ ಕತ್ತರಿಸಿ ಹಾಕಿದ ಮಗ -ಬೆಳಗಾವಿ ಬಳಿ ಘಟನೆ

ಬೆಳಗಾವಿ ಬಳಿ ಬೆಳ್ಳಂಬಳಗ್ಗೆ ನಿವೃತ್ತ ಪೊಲೀಸ್ ಅಧಿಕಾರಿಯ ಕಗ್ಗೊಲೆ

ಬೆಳಗಾವಿ ಬಳಿ ಬೆಳ್ಳಂಬಳಗ್ಗೆ ನಿವೃತ್ತ ಪೊಲೀಸ್ ಅಧಿಕಾರಿಯ ಕಗ್ಗೊಲೆ

ತಂದೆಯನ್ನೆ ತುಂಡು ತುಂಡಾಗಿ ಕತ್ತರಿಸಿ ಕೊಚ್ಚಿ ಹಾಕಿದ   ಮಗ

 ಪ್ರಗತಿವಾಹಿನಿ ಸುದ್ದಿ, ಅಗಸಗಿ: 
ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದಲ್ಲಿ ಬೆಳ್ಳಂಬಬೆಳಗ್ಗೆ ಕ್ರೂರಿ ಮಗನೊಬ್ಬ ತನ್ನ ಹೆತ್ತ ತಂದೆಯನ್ನೆ ಇಳಿಗೆ ಮಣೆಯಿಂದ ಇರಿದು, ತಲೆ ಮತ್ತು ಕಾಲುಗಳನ್ನು ತುಂಡಾಗಿ ಕತ್ತರಿಸಿ ಬೇರ್ಪಡಿಸಿದ್ದಾನೆ. ರಘುವೀರ ಕುಂಬಾರ (25) ತಂದೆಯನ್ನು ಕೊಚ್ಚಿ ಹಾಕರದ ಮಗ.
ಕೊಲೆಯಾದ ವ್ಯಕ್ತಿ ಶಂಕ್ರೆಪ್ಪಾ ಕುಂಬಾರ (60) ನಿವೃತ್ತ ಸಶಸ್ತ್ರ ಪಡೆ ಪೊಲೀಸ್ ಅಧಿಕಾರಿ. ಸಿದ್ದೇಶ್ವರ ನಗರದ ನಿವಾಸಿ. ಶಂಕ್ರೆಪ್ಪಾ ಅವರು 3 ತಿಂಗಳ ಹಿಂದೆ ಪೊಲೀಸ್ ಸೇವೆಯಿಂದ ನಿವೃತ್ತಿಗೊಂಡಿದ್ದರು. ನಿನ್ನೆ ಇವರ  ಮಗ  ರಘುವೀರ  ಸದಾ ಮೊಬೈಲ್ನಲ್ಲಿ ಮಗ್ನನಾಗಿದ್ದನ್ನು ಕಂಡು ಬುದ್ದಿವಾದ ಹೇಳಿದ್ದಾರೆ.  ಇದಕ್ಕೆ ಕುಪಿತನಾದ ಮಗ ಅಕ್ಕಪಕ್ಕದವರ ಮನೆಯ ಕಿಟಕಿ ಗಾಜುಗಳನ್ನು ಒಡೆದು ರಂಪಾಟ ಮಡಿದ್ದಾನೆ. ನೆರೆಹೊರೆಯರು ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ನಂತರ ರಘುವೀರ ಮತ್ತು ಅವರ ಪಾಲಕರನ್ನು ಕರೆಸಿದ ಪೊಲೀಸರು ಆತನಿಗೆ ಬುದ್ದಿವಾದ ಹೇಳಿ ಕಳಿಸಿದ್ದಾರೆ.
ಆದರೆ ಮನೆಗೆ ತೆರಳಿದ ಈತ ರಾತ್ರಿ 12 ಗಂಟೆಯಾದರೂ ಮೊಬೈಲ್ ನಲ್ಲೆ ಮಗ್ನನಾಗಿದ್ದನು. ಇದನ್ನು ಕಂಡ ತಂದೆ ಬೈದಿದ್ದಾರೆ. ನಂತರ ಮಲಗಿದ ಮಗ ಇಂದು ಬೆಳಗ್ಗೆ 5 ಗಂಟೆಗೆ ತನ್ನ ತಾಯಿಯನ್ನು ಮತ್ತೊಂದು ರೂಮಿನಲ್ಲಿ ಕೂಡಿ ಹಾಕಿದ್ದಾನೆ. ಕೈಗೆ ಸಿಕ್ಕ ಇಳಿಗೆ ಮಣೆಯಿಂದ ತಂದೆಯನ್ನು ಇರಿದಿದ್ದಾನೆ. ನಂತರ ಕೆಳಗೆ ಬಿದ್ದ ತಂದೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ತಲೆ ಮತ್ತು ಕಾಲು ಬೇರ್ಪಡಿಸುತ್ತಿದ್ದ. ಈ  ಸಮಯದಲ್ಲಿ ವಿಷಯ ತಿಳಿದ ಪೋಲಿಸರು ಸ್ಥಳಕ್ಕೆ ಆಗಮಿಸಿದ್ದಾರೆ. ಆಗ ತನ್ನ ಕೃತ್ಯ ನಿಲ್ಲಿಸಿದ್ದಾನೆ. ಪೋಲಿಸರು ವಶಕ್ಕೆ ಪಡೆದುಕೊಂಡರೂ ನಾನು ಇನ್ನೂ ನನ್ನ ತಂದೆಯನ್ನು ಕತ್ತರಿಸಬೇಕೇಂದು ಗೊಗೇರೆದಿದ್ದಾನೆ.
ತಕ್ಷಣ ಕಾಕತಿ ಪಿಐ ಶ್ರೀಶೈಲ ಕೌಜಲಗಿ ಸ್ಥಳಕ್ಕಾಗಮಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ವಿಷಯ ತಿಳಿದ ಎಸಿಪಿ ಶಿವಾರೆಡ್ಡಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಘಟನೆಯ ವಿವರ ಪಡೆದಿದ್ದು, ಹೆಚ್ಚಿನ ತನಿಖೆಗೆ ಸೂಚಿಸಿದ್ದಾರೆ.
(ಫೋಟೋಗಳು ಅತ್ಯಂತ ಭೀಕರವಾಗಿರುವುದರಿಂದ ಅವುಗಳನ್ನು ಪ್ರಕಟಿಸಿಲ್ಲ)