Kannada NewsKarnataka News

*ಮೊದಲ ದಿನ ಕಾಲೇಜಿಗೆ ಹೊರಟಿದ್ದ ಅಕ್ಕ-ತಮ್ಮ ಸಾವು*

ಪ್ರಗತಿವಾಹಿನಿ ಸುದ್ದಿ: ರಜೆ ಮುಗಿಸಿ ಮೊದಲ ದಿನ ಕಾಲೇಜಿಗೆ ಹೊರಟಿದ್ದ ಅಕ್ಕ-ತಮ್ಮ ಭೀಕರ ಅಪಘಾತಕ್ಕೆ ಬಲಿಯಾಗಿರುವ ದಾರುಣ ಘಟನೆ ನಗರದಲ್ಲಿ ನಡೆದಿದೆ.

ಬೆಂಗಳೂರಿನ‌ ದೊಡ್ಡನಾಗಮಂಗಲದ ಕೆಂಪೇಗೌಡ ಬಡಾವಣೆಯ ಮಧುಮಿತ (20), ರಂಜನ್‌ (18) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿ ಪೊಲೀಸ್‌ ಠಾಣೆ ವ್ಯಾಪ್ತಿಯ ದೊಡ್ಡ ನಾಗಮಂಗಲದಲ್ಲಿ ಈ ಘಟನೆ ನಡೆದಿದೆ.

ಮಧುಮಿತ ರಜೆ ಮುಗಿಸಿ ಮೊದಲ ದಿನ ಕಾಲೇಜು ಪ್ರಾರಂಭ ಎಂದು ತಮ್ಮನ ಜೊತೆ ಕಾಲೇಜಿಗೆ ಹೊರಟಿದ್ದಳು. ಬೈಕ್‌ನಲ್ಲಿ ಹೋಗುತ್ತಿದ್ದಾಗ ನೀರಿನ ಟ್ಯಾಂಕರ್ ಚಾಲಕ ಏಕಾಏಕಿ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮವಾಗಿ ಅಕ್ಕ-ತಮ್ಮ ಇಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

Home add -Advt

ಸಹೋದರಿ ಮಧುಮಿತಳನ್ನು ಕಾಲೇಜಿಗೆ ಬಿಟ್ಟುಬರಲು ರಂಜನ್‌ ಬೈಕ್‌ನಲ್ಲಿ ಹೊರಟಿದ್ದ. ಅತಿ ವೇಗವಾಗಿ ಬಂದ ನೀರಿನ ಟ್ಯಾಂಕರ್‌ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಆಗ ಕೆಳಗೆ ಬಿದ್ದ ಅಕ್ಕ-ತಮ್ಮನ ಮೇಲೆ ವಾಟರ್‌ ಟ್ಯಾಂಕರ್‌ನ ಹಿಂಬದಿಯ ಚಕ್ರ ಹರಿದಿದೆ.

ವಾಟರ್ ಟ್ಯಾಂಕರ್ ಬೈಕ್‌ಗೆ ಡಿಕ್ಕಿ ಹೊಡೆಯುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಾಟರ್ ಟ್ಯಾಂಕರ್ ಚಾಲಕನ ಮೇಲೆ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.

Related Articles

Back to top button