Belagavi NewsBelgaum NewsKannada NewsKarnataka News
ರೈತನನ್ನು ನದಿಯೊಳಗೆ ಎಳೆದೊಯ್ದ ಮೊಸಳೆ: ಬೆಳಗಾವಿಯಲ್ಲಿ ಘಟನೆ

ಪ್ರಗತಿವಾಹಿ ಸುದ್ದಿ, ಬೆಳಗಾವಿ: ದೂದಗಂಗಾ ನದಿಯಲ್ಲಿ ಕೃಷಿ ಕೆಲಸ ಮುಗಿಸಿ ಸ್ನಾನ ಮಾಡಲು ತೆರಳಿದ್ದ ರೈತನ ಮೇಲೆ ಮೊಳಸೆ ದಾಳಿ ಮಾಡಿರುವ ಪರಿಣಾಮ ರೈತ ಸಾವನ್ನಪ್ಪಿದ್ದಾನೆ.
ಘಟನೆಯು ಚಿಕ್ಕೋಡಿ ತಾಲೂಕಿನ ದತ್ತವಾಡ-ಸದಲಗಾ ಬಳಿಯ ದೂಧಗಂಗಾ ನದಿ ದಡದಲ್ಲಿ ನಡೆದಿದೆ. ಮೊಸಳೆ ರೈತನನ್ನು ನೀರಿನೊಳಗೆ ಎಳೆದುಕೊಂಡು ಹೋದ ಪರಿಣಾಮ ರೈತ ಮೃತಪಟ್ಟಿದ್ದಾನೆ. ಚಿಕ್ಕೋಡಿ ತಾಲೂಕಿನ ಸದಲಗಾ ಗ್ರಾಮದ ನಿವಾಸಿ ಮಹಾದೇವ ಪುನ್ನಪ್ಪ ಖುರೆ (72) ಮೃತ ರೈತ. ರೈತ ನದಿಯ ಪಕ್ಕದಲ್ಲಿ ತಮ್ಮ ಜಮೀನಿನಲ್ಲಿ ಕೃಷಿ ಕೆಲಸ ಮುಗಿಸಿ ಸ್ನಾನಕ್ಕೆಂದು ತೆರಳಿದ್ದರು. ನದಿಯಲ್ಲಿ ಸ್ವಲ್ಪ ಹೊತ್ತು ಈಜಿಕೊಂಡು ನಂತರ ನದಿಯ ದಡಕ್ಕೆ ಬರುತ್ತಿದ್ದಾಗ ಮೊಸಳೆ ಅವರ ಕಾಲು ಹಿಡಿದು ನೀರಿನೊಳಗೆ ಎಳೆದುಕೊಂಡು ಹೋಗಿದೆ.
ರೈತನ ತೊಡೆಯ ಮೇಲೆ ಗಾಯದ ಗುರುತು ಇದ್ದು, ರಮೇಶ ಪ್ರಧಾನ ಎಂಬುವವರ ಜಮೀನಿನ ಬಳಿಯ ನದಿ ದಡದಲ್ಲಿ ಮೃತ ದೇಹ ಪತ್ತೆಯಾಗಿದೆ. ಈ ಕುರಿತು ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.