
ಪ್ರಗತಿವಾಹಿನಿ ಸುದ್ದಿ : ಆದಾಯ ಮೀರಿದ ಆಸ್ತಿ ಹೊಂದಿದ್ದಕ್ಕಾಗಿ ಮಹಿಳಾ ಅಧಿಕಾರಿಯನ್ನು ಪೊಲೀಸರು ಬಂಧಿಸಿದಲ್ಲದೆ ಅವರ ಮನೆಯಿಂದ 1 ಕೋಟಿಗೂ ಅಧಿಕ ಹೆಚ್ಚು ಹಣ ಹಾಗೂ 1 ಕೋಟಿ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಅಸ್ಸಾಂ ನಾಗರಿಕ ಸೇವಾ ಅಧಿಕಾರಿ ನೂಪುರ್ ಬೋರಾ ಅವರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ವಿವಾದಾತ್ಮಕ ಭೂ ಸಂಬಂಧಿ ವಿಷಯಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ವಿಶೇಷ ವಿಜಿಲೆನ್ಸ್ ಸೆಲ್ ಕಳೆದ 6 ತಿಂಗಳಿನಿಂದ ಅವರ ಮೇಲೆ ನಿಗಾ ಇಟ್ಟಿದೆ ಎಂದು ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ನೂಪುರ್ ಬೋರಾ 2019 ರ ಬ್ಯಾಚ್‌ನ ಎಸಿಎಸ್ ಅಧಿಕಾರಿ, ಕಾಮರೂಪ ಜಿಲ್ಲೆಯ ಗೊರೊಯಿಮರಿ ಪ್ರದೇಶದಲ್ಲಿ ಅವರನ್ನು ಸರ್ಕಲ್ ಆಫೀಸರ್ ಆಗಿ ನೇಮಿಸಲಾಯಿತು.
ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ವಿಶೇಷ ತಂಡವನ್ನು ರಚಿಸಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ನೂಪುರ್ ಬೋರಾ ಪೊಲೀಸ್ ವಶದಲ್ಲಿದ್ದಾರೆ.