ಪ್ರಗತಿವಾಹಿನಿ ಸುದ್ದಿ; ಕೊಪ್ಪಳ: ತನ್ನದೇ ಕ್ರೂಸರ್ ವಾಹನಕ್ಕೆ ಮಾಲೀಕನೊಬ್ಬ ಬೆಂಕಿಯಿಟ್ಟ ಘಟನೆ ಕೊಪ್ಪಳ ಜಿಲ್ಲೆಯ ಎಲ್ ಐಸಿ ಕಚೇರಿ ಎದುರು ನಡೆದಿದೆ.
ಫೈನಾನ್ಸ್ ನವರ ಕಿರಿಕಿರಿಗೆ ಬೇಸತ್ತು ಕ್ರೂಸರ್ ವಾಹನದ ಮಾಲೀಕ ವಾಹನಕ್ಕೆ ನಡುರಸ್ತೆಯಲ್ಲಿ ಬೆಂಕಿ ಹಚ್ಚಿದ್ದಾನೆ. ರಸ್ತೆ ಮಧ್ಯೆ ವಾಹನ ಧಗ ಧಗನೆ ಹೊತ್ತಿ ಉರಿದಿದ್ದು, ಅಗ್ನಿಶಾಮಕ ಸಿಬ್ಬಂದಿಗಳು ಬಂದು ಬೆಂಕಿ ನಂದಿಸುವಷ್ಟರಲ್ಲಿ ವಾಹನ ಸಂಪೂರ್ಣ ಸುಟ್ಟು ಕರಕಲಾಗಿದೆ.
ಕ್ರೂಸರ್ ವಾಹನ ಮಾಲೀಕ ಸುಭಾಷ್, ತಾನೇ ವಾಹನಕ್ಕೆ ಬೆಂಕಿಯಿಟ್ಟಿದ್ದೇನೆ. ಕಳೆದ ಒಂದು ವಾರದಿಂದ ಫೈನಾನ್ಸ್ ನವರ ಕಾಟ ಜೋರಾಗಿತ್ತು. ಪ್ರತಿದಿನ ಕರೆ ಮಾಡಿ ಲೋನ್ ತೀರಿಸುವಂತೆ ಹಿಂಸಿಸುತ್ತಿದ್ದರು. ವಾಹನದ ಮೇಲೆ ಲೋನ್ ಪಡೆದು ಖರೀದಿಸಿದ್ದೆ. ಈಗ ಫೈನಾನ್ಸ್ ನವರ ಕಾಟ ತಡೆಯಲಾಗದೇ ವಾಹನಕ್ಕೆ ಬೆಂಕಿಯಿಟ್ಟಿದ್ದೇನೆ ಎಂದು ಅಳಲು ತೋಡಿಕೊಂಡಿದ್ದಾರೆ.
ನಿರ್ದೇಶಕ ಎಸ್.ನಾರಾಯಣ್-ಡಿ.ಕೆ.ಶಿವಕುಮಾರ್ ಭೇಟಿ; ಕುತೂಹಲ ಮೂಡಿಸಿದ ಕಲಾ ಸಾಮ್ರಾಟ್ ನಡೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ