Latest

ವಿಕೃತಕಾಮಿ ಬಂಧನ

ಪ್ರಗತಿವಾಹಿನಿ ಸುದ್ದಿ; ಚಿಕ್ಕಬಳ್ಳಾಪುರ: ಮಹಿಳೆಯನ್ನು ಕೊಂದು ಆಕೆಯ ಮೃತದೇಹದೊಂದಿಗೆ ಅತ್ಯಾಚಾರವೆಸಗಿ ಪರಾರಿಯಾಗಿದ್ದ ವಿಕೃತ ಕಾಮಿಯೊಬ್ಬನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಚಿಕ್ಕಬಳ್ಳಾಪುರದ ಜಮೀನೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಕಣ್ಣುಹಾಕಿದ್ದ ವ್ಯಕ್ತಿ, ಆಕೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಆಕೆ ಸಹಕರಿಸಿಲ್ಲ ಎಂದು ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿ ನಂತರ ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸಿ ಪರಾರಿಯಾಗಿದ್ದ.

ಚಿಂತಾಮಣಿ ತಾಲೂಕಿನ ಕೋನಾಪುರ ಗ್ರಾಮದ 27 ವರ್ಷದ ಗೃಹಿಣಿ ಮೃತ ಮಹಿಳೆ. ಬಂಧಿತ ಆರೋಪಿ ಕೆ.ಎನ್.ಶಂಕರಪ್ಪ ಎಂದು ಗುರುತಿಸಲಾಗಿದ್ದು, ಆಂಧ್ರಪ್ರದೇಶ ಮೂಲದವನೆಂದು ತಿಳಿದುಬಂದಿದೆ. ಸ್ನೇಹಿತನ ಮನೆಗೆಂದು ಬಂದವನು ಈ ಕೃತ್ಯವೆಸಗಿದ್ದಾನೆ.

 

Home add -Advt

Related Articles

Back to top button