Latest

ಈ ಮಹಿಳೆಯರು ಚಿನ್ನ ಸಾಗಾಟ ಮಾಡುತ್ತಿದ್ದ ರೀತಿ ಕೇಳಿದರೆ ಶಾಕ್ ಆಗ್ತೀರಾ

ಪ್ರಗತಿವಾಹಿನಿ ಸುದ್ದಿ; ಮಲಪ್ಪುರಂ: ಒಳ ಉಡುಪಿನಲ್ಲಿ ಚಿನ್ನವಿಟ್ಟು ಅಕ್ರಮವಾಗಿ ಸಾಗಾಟ ಮಾಡುತ್ತದ್ದ ಇಬ್ಬರು ಮಹಿಳೆಯರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರಿಂದ 2.3 ಕೆಜಿ ಚಿನ್ನವನ್ನು ಜಪ್ತಿ ಮಾಡಿದ್ದಾರೆ.

ಶಾರ್ಜಾ ದಿಂದ ಕ್ಯಾಲಿಕಟ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಇಬ್ಬರು ಮಹಿಳಾ ಪ್ರಯಾಣಿಕರನ್ನು ಕಸ್ಟಮ್ಸ್ ವಿಭಾಗದ ಅಧಿಕಾರಿಗಳು ತಪಾಸಣೆ ನಡೆಸಿದಾಗ ಮಹಿಳೆಯ ಒಳ ಉಡುಪಿನಲ್ಲಿ 1650 ಗ್ರಾಂ ಚಿನ್ನ ಹಾಗೂ ಕ್ಯಾಪ್ಸೂಲ್ಸ್ ರೂಪದಲ್ಲಿ 650 ಗ್ರಾಂ ಚಿನ್ನ ಪತ್ತೆಯಾಗಿದೆ.

ಕೊಲ್ಲಿ ರಾಷ್ಟ್ರಗಳಿಂದ ವಿಮಾನದ ಮೂಲಕವಾಗಿ ಮಹಿಳೆಯರು ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.

 

Home add -Advt

Related Articles

Back to top button