Belagavi NewsBelgaum NewsKannada NewsKarnataka NewsLatestPolitics

*ಪಾಲಿಕೆ ಆಯುಕ್ತ ಹಾಗೂ ಉಪ ಆಯುಕ್ತರಿಗೆ ಸೈಬರ್ ವಂಚಕರ ಕಾಟ: ದೂರು ದಾಖಲು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರ ಹೆಸರಿನಲ್ಲಿ ಸೈಬ‌ರ್ ವಂಚಕರು ಉಪ ಆಯುಕ್ತರಿಗೆ ವಾಟ್ಸಾಪ್ ಮೆಸೇಜ್ ಕಳುಹಿಸಿ 50,000 ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ನಡೆದಿದೆ.

ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರ ಹೆಸರಿನಲ್ಲೂ ವಂಚನೆಗಿಳಿದ ಸೈಬರ್ ಖದೀಮರು, ಪಾಲಿಕೆ ಆಯುಕ್ತರ ಹೆಸರು ಹೇಳಿ ವಾಟ್ಸಪ್ ಮೂಲಕ ಪಾಲಿಕೆ ಉಪ ಆಯುಕ್ತ ಉದಯ ಕುಮಾರ್ ತಳವಾರಗೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. 

ಪಾಲಿಕೆ ಆಯುಕ್ತ ಕಾರ್ತಿಕ್ ಅವರ ಫೋಟೊ ಡಿಪಿ ಇಟ್ಟಿರೋ ವಾಟ್ಸಪ್ ನಿಂದ ಮೆಸೇಜ್ ಮಾಡಿ ತುರ್ತಾಗಿ 50 ಸಾವಿರ ಹಣ ಅಕೌಂಟ್‌ಗೆ ಹಾಕಿ, ನಾನು ಮೀಟಿಂಗ್‌ನಲ್ಲಿರುವೆ, ಹಣ ಹಾಕಿ ಸ್ಕ್ರೀನ್ ಶಾಟ್ ಕಳಿಸುವಂತೆ ಸಂದೇಶ ಕಳುಹಿಸಿದ್ದಾರೆ.‌ ಮೆಸೇಜ್ ನೋಡಿ ಉಪ ಆಯುಕ್ತ ಉದಯಕುಮಾರ್ ತಳವಾರ ಅವರು, ಹಣ ಕೇಳಿದ ತಕ್ಷಣವೇ ಆ ನಂಬರ್‌ಗೆ ವಾಟ್ಸಪ್ ಕಾಲ್ ಮಾಡಿದ್ದಾರೆ.‌ ಆದರೆ ಕರೆ ಸ್ವೀಕರಿಸದೇ ಮೀಟಿಂಗ್‌ನಲ್ಲಿದ್ದೇನೆ ಎಂದು ವಂಚಕನಿಂದ ಮೇಸೆಜ್ ಮಾಡಲಾಗಿದೆ. ಅನುಮಾನಗೊಂಡ ಉಪ ಆಯುಕ್ತ ಪಾಲಿಕೆ ಆಯುಕ್ತ ಕಾರ್ತಿಕ್ ಅವರ ಪರ್ಸನಲ್ ನಂಬರ್ ಗೆ ಕರೆ ಮಾಡಿದ್ದಾರೆ.‌ ಆಗ ಘಟನೆ ಮಾಹಿತಿ ತಿಳಿದ ಪಾಲಿಕೆ ಆಯುಕ್ತರು ಶಾಕ್ ಆಗಿದ್ದಾರೆ. ಉಪ ಆಯುಕ್ತ ಉದಯ ಕುಮಾರ ಅವರು ಕೂಡಲೇ ಬೆಳಗಾವಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Home add -Advt

Related Articles

Back to top button