ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಲೋಕಸಭಾ ಮತಕ್ಷೇತ್ರದ ಉಪ ಚುನಾವಣೆ-೨೦೨೧ ಕುರಿತು ಸ್ವೀಪ್ ಕಾರ್ಯಕ್ರಮದಡಿ ಜಿಲ್ಲಾ ಸ್ವೀಪ್ ಸಮಿತಿ ಬೆಳಗಾವಿ ವತಿಯಿಂದ ಮತದಾರರಿಗೆ ಮತದಾನದ ಜಾಗೃತಿ ಕುರಿತು ಸೈಕಲ್ ರ‍್ಯಾಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಇಂದು ಮುಂಜಾನೆ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ ಸುಮಾರು ೧೫೦ ಜನ ಡೈನಾಮಿಕ್ ಅಥ್ಲೆಟಿಕ್ ಕ್ಲಬ್ ಬೆಳಗಾವಿ , ಸ್ಕೌಟ್ಸ್ ಮತ್ತು ಗೈಡ್ಸ್ ಕಲ್ಲೇಹೋಳ, ಜಿಲ್ಲಾ ಕರಾಟೆ ಕ್ಲಬ್, ಜಿಲ್ಲಾ ಸೈಕ್ಲಿಂಗ್ ಅಸೋಸಿಯೆಶನ್, ಬೆಳಗಾವಿ ಹಾಗೂ ಕಾಲೇಜು ವಿದ್ಯಾರ್ಥಿಗಳಿಂದ ಸೈಕಲ್ ರ‍್ಯಾಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರ‍್ಯಾಲಿಗೆ ಪಿ.ಬಿ.ದುಡಗುಂಟಿ, ಮುಖ್ಯ ಲೆಕ್ಕಾಧಿಕಾರಿಗಳು, ಜಿಲ್ಲಾ ಪಂಚಾಯತ ಬೆಳಗಾವಿ ಹಾಗೂ ಕೊಳೇಕರ, ಉಪ ನಿರ್ದೆಶಕರು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಬೆಳಗಾವಿ, ಮಲ್ಲಿಕಾರ್ಜುನ ಕಲಾದಗಿ ಕಾರ್ಯನಿರ್ವಾಹಕ ಅಧಿಕಾರಿಗಳು ತಾ.ಪಂ ಬೆಳಗಾವಿ, ಜಿಲ್ಲಾ ಸ್ವೀಪ್ ಐಕಾನ್ ಗಳಾದ ರಾಘವೇಂದ್ರ ಅನ್ವೇಕರ್, ರೋಹನ್ ಕೊಕನೆ ಇವರು ಚಾಲನೆ ನೀಡಿದರು.
ರ‍್ಯಾಲಿಯು ಚೆನ್ನಮ್ಮ ವೃತ್ತದಿಂದ ಪ್ರಾರಂಭವಾಗಿ ಬೋಗಾರವೇಸ್ ರಸ್ತೆ ಮುಖಾಂತರ ಸಂಚರಿಸಿ ಬಸವೇಶ್ವರ ವೃತ್ತ (ಗೋವಾವೇಸ್) ದಲ್ಲಿ ಅಂತ್ಯಗೊಂಡಿತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ತಂಡದ ರವಿ ಭಜಂತ್ರಿ, ಪಿ.ಪಿ ದೇಶಪಾಂಡೆ, ಐ.ಡಿ.ಹಿರೇಮಠ, ಎ.ಪಿ.ಬಸನಾಳ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಿಬ್ಬಂದಿಗಳು ಹಾಗೂ ಸೈಕಲಿಂಗ್ ಕೋಚ್ ಎಮ್ಪಿ ಮರನೂರ ಹಾಜರಿದ್ದರು
ಬೆಳಗಾವಿ ಲೋಕಸಭಾ ಉಪಚುನಾವಣೆ: ಕಣದಲ್ಲಿ 10 ಅಭ್ಯರ್ಥಿಗಳು
ಶಾಲೆಗಳ ಬೇಸಿಗೆ ರಜೆ: 2 -3 ದಿನದಲ್ಲಿ ನಿರ್ಧಾರ ಸಾಧ್ಯತೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ