Kannada NewsLatestNational

*ಸಿಲಿಂಡರ್ ಬ್ಲಾಸ್ಟ್: ತಾಯಿ ಮತ್ತು ಮೂರು ಮಕ್ಕಳ ಸಾವು*

ಪ್ರಗತಿವಾಹಿನಿ ಸುದ್ದಿ: ಎಲ್ ಪಿ ಜಿ ಸಿಲಿಂಡರ್ ಬ್ಲಾಸ್ಟ್ ಆದ ಪರಿಣಾಮ ತಾಯಿ ಮತ್ತು ಮೂರು ಜನ ಮಕ್ಕಳು ಸಾವನ್ನಪ್ಪಿರುವ ಘಟನೆ ನಡೆದೆ. ಘಟನೆಯಲ್ಲಿ ತಾಯಿ ಆರತಿ (41) ಇಬ್ಬರು ಹೆಣ್ಣು ಮಕ್ಕಳಾದ ಆಂಚಲ-(14) ಸೃಷ್ಠಿ-(11) ಹಾಗೂ ಮಗ ಕುಂದನ-(12) ಮೃತ ಪಟ್ಟಿದ್ದಾರೆ.‌ ಈ ದುರ್ಘಟನೆಯು ಉತ್ತರ ಪ್ರದೇಶದ ಭಲುಮಿ ಪೊಲೀಸ್ ಠಾಣಾ ವ್ಯಾಪ್ತಿಯ ಡುಮ್ರಿ ಎಂಬ ಹಳ್ಳಿಯಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.‌

Home add -Advt

ಶನಿವಾರ ಸಾಯಂಕಾಲ ತಾಯಿ ಆರತಿ ಟೀ ತಯಾರಿಸುವ ವೇಳೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.‌ ಈ ಘಟನೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷಗೆ ಕಳುಹಿಸಿದ್ದಾರೆ. ಇನ್ನೂ ಘಟನೆ ನಡೆಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಬೆಂಕಿ ನಂದಿಸಿದ್ದಾರೆ.‌ ವಿಧಿವಿಜ್ಞಾನ ತಂಡಗಳು ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

Related Articles

Back to top button