Latest

ಸಿದ್ದರಾಮಯ್ಯ ಬಿಜೆಪಿಗೆ ಬಂದರೂ ಅಚ್ಚರಿಯಿಲ್ಲ

ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಡುವಿನ ಶೀತಲ ಸಮರ ಸಿದ್ದರಾಮಯ್ಯನವರು ಬಿಜೆಪಿಗೆ ಸೇರ್ಪಡೆಯಾಗುವಂತೆ ಮಾಡಬಹುದು ಎಂದು ಹೇಳುವ ಮೂಲಕ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಪರೋಕ್ಷವಾಗಿ ಸಿದ್ದರಾಮಯ್ಯನವರನ್ನು ಬಿಜೆಪಿಗೆ ಆಹ್ವಾನಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿ.ಟಿ ರವಿ, ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರ ಸಮರ ಯಾವ ಮಟ್ಟಕ್ಕೆ ಬೇಕಾದರು ಹೋಗಬಹುದು. ಅದು ಸಿದ್ದರಾಮಯ್ಯ ಬಿಜೆಪಿ ಬರುವ ಬೆಳವಣಿಗೆ ಬೇಕಾದರೂ ಆಗಬಹುದು ಎಂದಿದ್ದಾರೆ.

Home add -Advt

ಸಿದ್ದರಾಮಯ್ಯ ಕಾಂಗ್ರೆಸ್ಸಿನಲ್ಲಿ ಇರುವಷ್ಟು ದಿನ ಅವರು ಬಿಜೆಪಿ ಹೊಗಳಿದರೆ ಅವರ ರಾಜಕೀಯ ಅಧಿಕಾರಕ್ಕೆ ಧಕ್ಕೆ ಬರುತ್ತೆ ಹಾಗಾಗಿ ಅವರು ಹೊಗಳಲ್ಲ. ಆ ಸತ್ಯ ಅವರಿಗೆ ಗೊತ್ತಿದೆ. ಬಿಜೆಪಿಗೆ ಬಂದ ದಿನ ಅವರು ಖಂಡಿತಾ ಹೋಗಳುತ್ತಾರೆ ಎಂದು ಹೇಳಿದರು.

ಯಾರೆಲ್ಲ ಬಿಜೆಪಿಗೆ ಬಂದರು ಮಾಧವ ರಾವ್ ಮಗ ಸಿಂಧ್ಯಾ ಬಿಜೆಪಿಗೆ ಬಂದ್ರು. ಎಸ್.ಎಂ.ಕೃಷ್ಣ ಬಂದ್ರು. ಯಾರು ನಮ್ಮನ್ನ ಬಹಳ ಟೀಕೆ ಮಾಡಿದ್ದರೋ ಅವರೆಲ್ಲಾ ನಮ್ಮ ಹಾದಿ ಹಿಡಿದಿದ್ದಾರೆ. ಹಾಗಾಗಿ ಸಿದ್ದರಾಮಯ್ಯನವರು ಕೂಡ ಬಿಜೆಪಿಗೆ ಬರುವುದಿಲ್ಲ ಎಂದೇನೂ ಇಲ್ಲ. ಬಂದರೂ ಆಶ್ಚರ್ಯವಲ್ಲ ಎಂದು ತಿಳಿಸಿದರು.

Related Articles

Back to top button