ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಅಕ್ರಮ ಸಂಪತ್ತಿನ ಆರೋಪ ಮಾಡಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಆಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ.
ಬೆಳಗಾವಿಯಲ್ಲಿ ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿದ್ದ ರಮೇಶ್ ಜಾರಕಿಹೊಳಿ ಡಿ.ಕೆ.ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಅವರ ವಿರುದ್ಧ 20 ಸಿಡಿ, ಆಡಿಯೋಗಳಿವೆ ಆದರೆ ಅದನ್ನು ಈಗ ಬಿಡುಗಡೆ ಮಾಡಲ್ಲ, ಸಿಬಿಐಗೆ ಕೊಡುತ್ತೇನೆ ಎಂದು ಹೇಳಿದ್ದ ರಮೇಶ್ ಜಾರಕಿಹೊಳಿ ಬಳಿಕ ಕೆಲ ಸಮಯದಲ್ಲೇ ಡಿ.ಕೆ.ಶಿವಕುಮಾರ್ ಅವರದ್ದು ಎಂದು ಹೇಳಿ ಆಡಿಯೋ ಬಿಡುಗಡೆ ಮಾಡಿದ್ದಾರೆ.
19 ಸೆಕೆಂಡ್ ಗಳ ಮಾತುಗಳು ಆಡಿಯೋದಲ್ಲಿದೆ. ನನಗೆ ದುಬೈನಲ್ಲಿ ಮನೆಯಿದೆ, ಲಂಡನ್, ಮುಂಬೈ ನಲ್ಲಿಯೂ ಫ್ಲ್ಯಾಟ್ ಇದೆ. ನಮ್ಮ ಮನೆಯ ಮೇಲೆ ರೇಡ್ ಆದಾಗ ಹಣ ಸೀಜ್ ಆಯ್ತು. ನಮ್ಮ ಮನೆಯಲ್ಲಿ 40-50 ಕೋಟಿ ರೂಪಾಯಿ ಸೀಜ್ ಆಯ್ತು ಎಂದು ಹೇಳಲಾಗಿದೆ. ಅದು ಡಿ.ಕೆ.ಸಿವಕುಮಾರ ಅವರ ಧ್ವನಿ ಎನ್ನುವುದು ರಮೇಶ ಜಾರಕಿಹೊಳಿ ಹೇಳಿಕೆ.
ಆಡಿಯೋ ಬಿಡುಗಡೆ ಬಳಿಕ ಮತ್ತೆ ಸುದ್ದಿಗೋಷ್ಠಿ ನಡೆಸಿದ ರಮೇಶ್ ಜಾರಕಿಹೊಳಿ, ನನ್ನ ವ್ಯಕ್ತಿತ್ವ ಇಡೀ ರಾಜ್ಯಕ್ಕೆ ಗೊತ್ತಿದೆ. ನಾನು ಏನಾದರೂ ಮಾತನಾಡಿದರೆ ಅದನ್ನು ಮಾಡಿಯೇ ತೀರುತ್ತೇನೆ. ನನ್ನ ಬಳಿ ಇಂತಹ ಇನ್ನೂ 20 ಆಡಿಯೋಗಳಿವೆ. ಸಿಡಿ ಕೇಸ್ ನಲ್ಲಿ ಡಿ.ಕೆ.ಶಿವಕುಮಾರ್ ಅರೆಸ್ಟ್ ಆಗಬೇಕು. ಕನಕಪುರದಲ್ಲಿ 100ರೂಪಾಯಿ ಕೊಟ್ಟು ಬ್ಲ್ಯು ಫಿಲ್ಮ್ ತೋರಿಸ್ತಿದ್ದ. ಇಂತಹ ಫ್ರಾಡ್ ಇಟ್ಕೊಂಡು ಕಾಂಗ್ರೆಸ್ ನವರು ರಾಜಕೀಯ ಮಾಡುತ್ತಾರಾ? ರಾಜ್ಯದ ಗತಿಯೇನು ಎಂದು ಪ್ರಶ್ನಿಸಿದ್ದಾರೆ.
*ಆಡಿಯೋ, ದಾಖಲೆಗಳಿವೆ, 20 ಸಿಡಿಗಳಿವೆ ಎನ್ನುತ್ತಲೇ ಯಾವುದನ್ನೂ ಬಿಡುಗಡೆ ಮಾಡಲ್ಲ ಎಂದ ರಮೇಶ್ ಜಾರಕಿಹೊಳಿ*
https://pragati.taskdun.com/ramesh-jarakiholid-k-shivakumarpressmeet/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ