ಪ್ರಗತಿವಾಹಿನಿ ಸುದ್ದಿ; ಮೈಸೂರು: ನಾನು ಇಂಧನ ಸಚಿವನಾಗಿದ್ದ ಸಂದರ್ಭದಲ್ಲಿನ ಎಲ್ಲಾ ದಾಖಲೆಗಳನ್ನು ಕೊಡುವಂತೆ ಬಿಜೆಪಿ ಸರ್ಕಾರ ಅಧಿಕಾರಿಗಳನ್ನು ಬೆದರಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಅಧಿಕಾರಿಗಳು ನನಗೆ ಕರೆ ಮಾಡಿ ಹೇಳುತ್ತಿದ್ದರೆ. ನನ್ನ ಅವಧಿಯ ದಾಖಲೆ ಕೊಡುವಂತೆ ಬಿಜೆಪಿಯವರು ಒತ್ತಡ ಹೇರುತ್ತಿದ್ದಾರೆ ಎಂದು. ಅದಕ್ಕೆ ನಾನು ಹೇಳಿದ್ದೇನೆ ಎಲ್ಲಾ ದಾಖಲೆಗಳನ್ನು ಕೊಡಿ ಅದೇನು ತನಿಖೆ ಮಾಡಬೇಕು ಮಾಡಲಿ ಎಂದರು.
ಕೇವಲ ದಾಖಲೆ ಮಾತ್ರ ಅಲ್ಲ, ನಾವು ತಪ್ಪು ಮಾಡಿದ್ದರೆ ಹಗ್ಗವನ್ನೂ ಕಳುಹಿಸಿಕೊಡುತ್ತೇವೆ. ಸುಮ್ಮನೆ ನನ್ನನ್ನು ಹಾಗೂ ಪಕ್ಷದ ನಾಯಕರನ್ನು ಹೆದರಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಯಾವುದಕ್ಕೂ ಹೆದರಲ್ಲ ಎಂದು ಗುಡುಗಿದರು.
ಇದೇವೇಳೆ ಸಿಎಂ ಬಸವರಾಜ್ ಬೊಮ್ಮಾಯಿ ಸಮಗ್ರ ತನಿಖೆ ಹೇಳಿಕೆಗೆ ವ್ಯಂಗ್ಯವಾಡಿದ ಡಿಕೆಶಿ, ಚಡ್ಡಿ, ಪ್ಯಾಂಟು, ಹಾಸಿಗೆ, ಮೊಟ್ಟೆ ಇತ್ಯಾದಿ ಎಲ್ಲಾ ತನಿಖೆ ಮಾಡಲಿ. ನಾನು ಎಲ್ಲದಕ್ಕೂ ಸಿದ್ದನಿದ್ದೇನೆ. ತನಿಖೆ ಮಾಡಲು ಮೂರು ವರ್ಷ ಬೇಕಾಯ್ತಾ ಇವರಿಗೆ? ಈಗ ಎಚ್ಚೆತ್ತುಕೊಂಡಿದ್ದಾರಾ? ಎಂದು ಕಿಡಿಕಾರಿದರು.
ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಸೇರಿದಂತೆ 7 ಜನರ ವಿರುದ್ಧ FIR ದಾಖಲು
https://pragati.taskdun.com/latest/actress-shreeleelamotherfir-fileagainestswarnalata/
ಸಹೋದರಿಯರನ್ನು ಹೊತ್ತೊಯ್ದು ಬರ್ಬರ ಹತ್ಯೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ