Latest

ಮಗನನ್ನು ನೀರಲ್ಲಿ ಮುಳುಗಿಸಿ ಕೊಂದ ತಾಯಿ

ಪ್ರಗತಿವಾಹಿನಿ ಸುದ್ದಿ; ಚಿಕ್ಕಬಳ್ಳಾಪುರ: ನೀರಿನ ಸಂಪಲ್ಲಿ 7 ವರ್ಷದ ಮಗನನ್ನು ಮುಳುಗಿಸಿಕೊಂದ ತಾಯಿ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಕೊತ್ತಪಲ್ಲಿ ಗ್ರಾಮದಲ್ಲಿ ನಡೆದಿದೆ.

ಶೋಭಾ ಮಗನನ್ನು ಕೊಂದು ತಾನೂ ಸಾವಿಗೆ ಶರಣಾದ ತಾಯಿ. 7 ವರ್ಷದ ವಿಶಾಲ್‍ ಮೃತ ಪುತ್ರ. ಮನೆಯ ಮುಂಭಾಗದ ಸಂಪಿನಲ್ಲಿ ಮಗನನ್ನ ಮುಳುಗಿಸಿ ಕೊಲೆ ಮಾಡಿರುವ ಶೋಭಾ, ಬಳಿಕ ಮನೆಗೆ ಬಂದು ಮೇಲಿನ ರೂಮಿನಲ್ಲಿ ನೇಣು ಬಿಗಿದುಕೊಂಡು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮಗ ವಿಶಾಲ್ ಮಾನಸಿಕ ಅಸ್ವಸ್ಥ ಹಾಗೂ ವಿಶೇಷ ಚೇತನನಾಗಿದ್ದ. ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗಿಲ್ಲ ಇದರಿಂದ ನೊಂದ ತಾಯಿ ಈ ಕೃತ್ಯ ನಡೆಸಿದ್ದಾಳೆ ಎನ್ನಲಾಗಿದೆ. ಮನೆಗೆ ಪತಿ ಬಂದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ಈ ಕುರಿತು ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Home add -Advt

Related Articles

Back to top button