ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಭ್ರಷ್ಟಾಚಾರದ ಹಗರಣ ಡೈವರ್ಟ್ ಮಾಡಲು ಬಿಜೆಪಿ ಸರ್ಕಾರ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣ ಬಳಸಿಕೊಂಡಿತು ಎಂಬ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನಿಡಿರುವ ಡಿ.ಕೆ.ಶಿವಕುಮಾರ್ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣವನ್ನು ನಾನು ಸಮರ್ಥಿಸಿಕೊಳ್ಳುತ್ತಿಲ್ಲ. ತನಿಖೆಗೂ ಮುನ್ನವೇ ಅಧಿಕಾರಿಗಳು ಇದನ್ನು ಭಯೋತ್ಪಾದನ ಕೃತ್ಯ ಎಂದು ಹೇಗೆ ಘೋಷಿಸಿದರು? ಎಂದು ಪ್ರಶ್ನಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಕ್ಷಮೆಯಾಚಿಸಬೇಕು ಎಂಬ ಬಿಜೆಪಿ ಆಗ್ರಹದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ನಾನು ಯಾರಿಗೂ ಕ್ಷಮೆ ಕೇಳುವುದಿಲ್ಲ. ಪ್ರಕರಣವನ್ನು ನಾನು ಸಮರ್ಥಿಸಿಕೊಂಡಿಲ್ಲ. ಅದೊಂದು ಇನ್ಸಿಡೆಂಟ್ ಆಗಿದೆ. ಅದಕ್ಕೆ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಆದರೆ ಅದನ್ನು ವೈಭವೀಕರಿಸಿದ ರೀತಿ ಸರಿಯಿಲ್ಲ. ಅಧಿಕಾರಿಗಳು ಇನ್ನೂ ಯಾರನ್ನೂ ಬಂಧಿಸಿಯೇ ಇಲ್ಲ, ತನಿಖೆಯನ್ನೂ ನಡೆಸಿಲ್ಲ ಆಗಲೇ ಸ್ಥಳಕ್ಕೆ ಬಂದ ತಕ್ಷಣ ಉಗ್ರರ ಚಟುವಟಿಕೆ ಎಂದು ಹೇಳಿದ್ದಾರೆ. ತನಿಖೆ ಮಾಡದೇಯೇ ಹೇಗೆ ಹೇಳಿದರು? ಈ ರೀತಿ ನಮ್ಮ ದಕ್ಷಿಣ ಕನ್ನಡದ, ಕರ್ನಾಟಕದ ಗೌರವ ಹಾಳು ಮಾಡುತ್ತೀದ್ದೀರಿ. ಇದರಿಂದ ಇಲ್ಲಿ ಯಾರೊಬ್ಬ ಇನ್ವೆಸ್ಟರ್ಸ್ ಬರ್ತಿಲ್ಲ. ಎಲ್ಲಾ ನಿರುದ್ಯೋಗಿಗಳಾಗುತ್ತಿದ್ದಾರೆ. ಇದರಿಂದ ರಾಜ್ಯ ಬಿಟ್ಟು ಹೊರ ರಾಜ್ಯ ದೇಶಗಳಿಗೆ ಹೋಗುತ್ತಿದ್ದಾರೆ.
ನಾನು ಯಾರನ್ನೂ ಕ್ಷಮೆ ಕೇಳಲ್ಲ. ಕ್ಷಮೆ ಕೇಳುವ ಅವಶ್ಯಕತೆ ಇಲ್ಲ. ಬಿಜೆಪಿಯವರು ಅಧಿಕಾರವನ್ನು ಪೊಲೀಸರ ಮೂಲಕ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ಅಧಿಕಾರಿಗಳನ್ನು ಬಳಸಿಕೊಂಡಿದ್ದಾರೆ. ವಿಷಯ ಬೇರೆಡೆ ಸೆಳೆಯಲು ಈ ರೀತಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
*ವೋಟರ್ ಐಡಿ ಹಗರಣ ಹೊರ ಬರುತ್ತಿದ್ದಂತೆ ಅಲ್ಲಿ ಕುಕ್ಕರ್ ಬಾಂಬ್ ಸ್ಫೋಟ…! – ಡಿ.ಕೆ.ಶಿವಕುಮಾರ ಆರೋಪ*
https://pragati.taskdun.com/d-k-shivakumarmangalore-bomb-blast-casestatment/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ