ಪ್ರಗತಿವಾಹಿನಿ ಸುದ್ದಿ; ಹಾವೇರಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ಇದೀಗ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಕಾಂಗ್ರೆಸ್ ಸೇರಲು ಎಷ್ಟು ಜನ ಶಾಸಕರು ಸಿದ್ಧರಾಗಿದ್ದಾರೆ ಗೊತ್ತೇ? ನಾನೇ ಸ್ವಲ್ಪ ತಡೆಯುವಂತೆ ಅವರಿಗೆ ಹೇಳಿದ್ದೇನೆ ಎಂದು ಡಿ,ಕೆ.ಶಿವಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಗೆ ಸೇರ್ಪಡೆಯಾಗಲು ಹಲವರು ಸಿದ್ಧರಿದ್ದಾರೆ. ಎಂಎಲ್ ಎ ಗಳೇ ರೆಡಿ ಇದ್ದಾರೆ. ನನ್ನ ಹತ್ರ ಸ್ವಲ್ಪ ಜಾಗವಿಲ್ಲ ಸ್ವಲ್ಪ ತಡೀರಪ್ಪ ಅಂದಿದ್ದೇನೆ. ಸೀಟ್ ಇಲ್ಲ ಅದಕ್ಕೆ ನಿಲ್ಲಿಸಿದ್ದೇನೆ. ಆಮೇಲೆ ಎಲ್ಲರ ಪಟ್ಟಿ ಕೊಡುತ್ತೇನೆ ಎಂದು ಹೇಳಿದ್ದಾರೆ.
ಇಬ್ಬರು ಬಿಜೆಪಿ ಶಾಸಕರು ಕಾಂಗ್ರೆಸ್ ಗೆ ಸೇರ್ಪಡೆಯಾಗಲು ಸಜ್ಜಾಗಿದ್ದಾರೆ. ಶೀಘ್ರದಲ್ಲಿಯೇ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿಸಿದ್ದಾರೆ. ಡಿಕೆ.ಶಿವಕುಮಾರ್ ಹೇಳಿಕೆ ಹಾವೇರಿ ಬಿಜೆಪಿ ಪಾಳಯದಲ್ಲಿ ಸಂಚಲನ ಮೂಡಿಸಿದೆ.
*ಮತ್ತೆ ಕುತೂಹಲ ಮೂಡಿಸಿದ ಹೆಚ್.ವಿಶ್ವನಾಥ್ ನಡೆ; ದಿಢೀರ್ ಸಿಎಂ ಭೇಟಿಯಾದ MLC*
https://pragati.taskdun.com/h-vishwanathcm-basavaraj-bommaimeet/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ