*ಕುರ್ಚಿಗಾಗಿ ಹೋರಾಟ ನಡೆದಿದೆ; ಸಿಕ್ಕಾಗ ಕುಳಿತುಬಿಡಿ…ಡಿಸಿಎಂ ಡಿಕೆಶಿ ಮಾರ್ಮಿಕ ಮಾತು*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದೇಶದಲ್ಲಿ ಕುರ್ಚಿಗಾಗಿ ಹೋರಾಟ ನಡೆಯುತ್ತಿದೆ. ಹಾಗಾಗಿ ಕುರ್ಚಿ ಸಿಕ್ಕರೆ ಬಿಡಬೇಡಿ ಕುಳಿತುಬಿಡಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಮಾರ್ಮಿಕವಾಗಿ ಹೇಳಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಡಾ.ಸೈಯದ್ ನಾಸಿರ್ ಹುಸೇನ್ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ನೆರೆದಿದ್ದ ಜನರನ್ನು ಉದ್ದೇಶಿಸಿ ನಿಮಗೆ ಕುರ್ಚಿ ಬೆಲೆ ಗೊತ್ತಿಲ್ಲ, ನಮಗೆ ಕುರ್ಚಿ ಸಿಕ್ಕರೆ ಸಾಕು ಅಂತಿದ್ದೀವಿ. ಇಡೀ ದೇಶದಲ್ಲಿ ಕುರ್ಚಿಗಾಗಿ ಹೋರಾಟ ನಡೆಯುತ್ತಿದೆ. ಕುರ್ಚಿ ಸಿಕ್ಕಿಲ್ಲ ಎಂದು ಹೊಡೆದಾಡುತ್ತಿದ್ದೇವೆ. ಕುರ್ಚಿ ಸಿಕ್ಕರೆ ಕುಳಿತುಬಿಡಿ ಎಂದು ಹಾಸ್ಯ ಚಟಾಕಿ ಬೀರಿದರು.
ಬಿಜೆಪಿ ನಾಗಪುರ ಯುನಿವರ್ಸಿಟಿ ಪಾಲಿಸಿ ತರಲು ಹೊರಟಿತ್ತು. ನಾವು ಅದನ್ನು ಬದಲಿಸುವುದಾಗಿ ಹೇಳಿದ್ದೆವು. ಆ ಕೆಲಸ ನಮ್ಮ ಸರ್ಕಾರ ಮಾಡುತ್ತಿದೆ. ಎನ್ ಇಪಿ ಬದಲಾವಣೆ ಮಾಡಲಾಗುವುದು ಎಂದು ಹೇಳಿದರು. ರಾಜೀವ್ ಗಾಂಧಿ ಅವರಿದ್ದಾಗ ಇದ್ದ ಎಜುಕೇಶನ್ ಪಾಲಿಸಿ ಈಗಿನ ಪಾಲಿಸಿ ನೋಡಿ. ಯಾರು ವಿದ್ಯಾವಂತರಾಗಲಿಲ್ವಾ? ಯಾರೂ ಐಎ ಎಸ್ ಅಧಿಕಾರಿಗಳು ಆಗಲಿಲ್ವಾ? ಎಂದು ಪ್ರಶ್ನಿಸಿದರು. ಯಾರು ನಮ್ಮ ಕಷ್ಟ ಕಾಲದಲ್ಲಿ ಸಹಾಯಕ್ಕೆ ನಿಂತರು ಅವರ ಜೊತೆ ನಮ್ಮ ಸರ್ಕಾರ ನಿಲ್ಲಲಿದೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಸಿದ್ಧಾಂತ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ