Latest

*ಮೀಸಲಾತಿ ವಿಚಾರದಲ್ಲಿ ಬಿಜೆಪಿ ಮೋಸದಾಟ ಬಯಲು; ಎಲ್ಲಾ ಸಮುದಾಯಗಳಿಗೂ ಸಿಎಂ ಬೊಮ್ಮಾಯಿಯಿಂದ ಮೋಸ; ಡಿ.ಕೆ.ಶಿವಕುಮಾರ್ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ; ಮೈಸೂರು: ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಬಿಜೆಪಿ ಸರ್ಕಾರ ಜನರಿಗೆ ವಂಚಿಸಿದೆ. ಬಿಜೆಪಿಯ ಮೋಸದಾಟ ಬಯಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಅಲ್ಪಸಂಖ್ಯಾತರನ್ನು ದೇಶದಿಂದ ಓಡಿಸಿ ಬಿಡ್ತೀರಾ? ಮೀಸಲಾತಿ ಹೆಚ್ಚಳದಲ್ಲಿ 9ನೇ ಶಡ್ಯೂಲ್ ಸೇರಿಸಬೆಕಿತ್ತು. ಯಾಕೆ ಸೇರಿಸಿಲ್ಲ. ಮೀಸಲಾತಿ ವಿಚಾರದಲ್ಲಿ ಅಫಿಡವಿಟ್ ಸಲ್ಲಿಸಲು ಸರ್ಕಾರ ವಿಫಲವಾಗಿದೆ. ಸುಪ್ರೀಂ ಕೋರ್ಟ್ ಗೆ ಯಾಕೆ ಅಫಿಡವಿಟ್ ಸಲ್ಲಿಸಲಾಗಿಲ್ಲ. ಸಿಎಂ ಏಕೆ ಮಿಸಲಾತಿ ವಿಚಾರದಲ್ಲಿ ಮೋಸದಾಟ ಆಡಿದರು? ಎಂದು ಪ್ರಶ್ನಿಸಿದ್ದಾರೆ.

ಮೀಸಲಾತಿ ಪರಿಷ್ಕರಣೆ ಹೆಸರಲ್ಲಿ ಸಿಎಂ ಬೊಮಮಯಿ ರಾಜ್ಯದ ಜನರಿಗೆ ದ್ರೋಹ ಮಾಡಿದ್ದಾರೆ. ಎಲ್ಲಾ ಸಮುದಾಯಗಳಿಗೂ ವಂಚಿಸುವ ಕೆಲಸ ಮಾಡಿದ್ದಾರೆ. ಬಿಜೆಪಿಯವರು ಸುಳ್ಳು ಹೇಳಿಕೊಂಡು ಕಾಲ ಕಳೆಯುವ ಕೆಲಸ ಮಾಡಿದ್ದಾರೆ. ಈ ಬಾರಿ ಚುನಾವಣೆಯಲ್ಲಿ 40% ಕಮಿಷನ್ ಸರ್ಕಾರದ ಸ್ಥಾನಗಳು 40ಕ್ಕೆ ಕುಸಿಯಲಿದೆ ಎಂದು ಹೇಳಿದರು.

https://pragati.taskdun.com/tamil-naducyclonekarnatakarain/

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button