ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೆಸರಿಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಏರ್ ರ್ಪೋರ್ಟ್ ಗೆ ಯಾರ ಹೆಸರನ್ನಾದರೂ ಇಡಲಿ ಆದರೆ ಭೂಮಿ ಕಳೆದುಕೊಂಡವರಿಗೆ ಸರ್ಕಾರ ಪರಿಹಾರ ನೀಡಲಿ ಎಂದು ಹೇಳಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಶಿವಮೊಗ್ಗ ಏರ್ ಪೋರ್ಟ್ ಗೆ ಯಡಿಯೂರಪ್ಪ ಹೆಸರನ್ನಾದರೂ ಇಡಲಿ ಯಾರ ಹೆಸರನ್ನಾದರೂ ಇಡಲಿ. ಆದರೆ ಏರ್ ಪೋರ್ಟ್ ನಿಂದ ಭೂಮಿ ಕಳೆದುಕೊಂಡ ರೈತರಿಗೆ ಮೊದಲು ಪರಿಹಾರ ಕೊಡಲಿ ಎಂದರು.
ಇದೇ ವೇಳೆ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಒತ್ತಡ ವಿಚಾರವಾಗಿ ಮಾತನಾಡಿದ ಡಿ.ಕೆ.ಶಿವಕುಮಾರ್, ನಾನು ರಮೇಶ್ ಜಾರಕಿಹೊಳಿ ಬಗ್ಗೆ ಮಾತನಾಡಲ್ಲ, ರಮೇಶ್ ಜಾರಕಿಹೊಳಿ, ಕೆ.ಎಸ್.ಈಶ್ವರಪ್ಪ ಮಂತ್ರಿ ಸ್ಥಾನ ಸಿಗದೇ ಹತಾಶರಾಗಿದ್ದಾರೆ. ಹಾಗಾಗಿ ಏನೇನೋ ಮಾತುಗಳನ್ನು ಆಡುತ್ತಿದ್ದಾರೆ ಎಂದರು.
ಇನ್ನು ಜೆಡಿಎಸ್ ಪಕ್ಷವನ್ನು ವಿಸರ್ಜಿಸಿ ಎಂದು ಹೆಚ್.ಡಿ.ಕುಮಾರಸ್ವಾಮಿಗೆ ನಾನು ಹೇಳಿಲ್ಲ. ಪಕ್ಷ ವಿಸರ್ಜನೆ ಮಾಡುತ್ತೇನೆ ಎಂದು ಅವರೇ ಹೇಳಿದ್ದಾರೆ ಎಂದರು.
ಇದೇ ವೇಳೆ ಫೆ.22ರಂದು ವಿಚಾರಣೆಗೆ ಹಾಜರಾಗುವಂತೆ ನನಗೆ ಇಡಿ ನೋಟಿಸ್ ನೀಡಿದೆ. ನ್ಯಾಷನಲ್ ಹೆರಾಲ್ಡ್ ದೇಣಿಗೆ ವಿಚಾರವಾಗಿ ವಿಚಾರಣೆಗೆ ಕರೆದಿದ್ದಾರೆ. ಇದೇ ವೇಳೆ ನನ್ನ ಮಗಳಿಗೆ ಸಿಬಿಐ ನೋಟಿಸ್ ನೀಡಿದ್ದು, ಮಗಳ ವಿದ್ಯಾಭ್ಯಾಸ, ಸ್ಕೂಲ್, ಕಾಲೇಜು ಶುಲ್ಕ ಕಟ್ಟಿದ್ದರ ಬಗ್ಗೆ ಕೇಳಿದ್ದಾರೆ. ಸಿಬಿಐನಂತಹ ದೊಡ್ಡ ಸಂಸ್ಥೆಗೆ ಮಾಡಲು ದೊಡ್ಡ ಕೆಲಸಗಳಿವೆ, ದೊಡ್ಡ ದೊಡ್ಡ ಕೇಸ್ ಬಿಟ್ಟು ಇಂತಹ ಚಿಕ್ಕ ವಿಚಾರಗಳನ್ನು ಕೆದಕುತ್ತಿರುವುದು ಯಾಕೆ? ಇಂತಹ ಪ್ರಶ್ನೆ ಕೇಳಲು ಅವರಿಗೆ ಸಲಹೆ ನೀಡಿದ್ಯಾರು? ಈ ಬಗ್ಗೆ ನಾನು ಸಿಬಿಐಗೆ ಪತ್ರ ಬರೆಯುತ್ತೇನೆ. ಕೇಂದ್ರ ಸರ್ಕಾರ ಕೀಳುಮಟ್ಟದ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದರು.
*ಕಬಡ್ಡಿ ಆಡುವಾಗಲೇ ಹೃದಯಾಘಾತ; ವಿದ್ಯಾರ್ಥಿನಿ ದುರ್ಮರಣ*
https://pragati.taskdun.com/kabaddistudentheart-attackdeathbangalore/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ