Kannada NewsKarnataka NewsLatest

*ಇಂತಹ ಬಾಂಬ್ ಗಳನ್ನು 1975ರಿಂದ ಸಾಕಷ್ಟು ನೋಡಿದ್ದೇನೆ; HDKಗೆ ಖಡಕ್ ತಿರುಗೇಟು ನೀಡಿದ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ವರ್ಗಾವಣೆ ದಂಧೆ ಬಗ್ಗೆ ಪೆನ್ ಡ್ರೈವ್ ಬಾಂಬ್ ಸಿಡಿಸಿದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದು, ಅವರು ಯಾವ ಬಾಂಬ್ ಬೇಕಾದರೂ ಹಾಕಲಿ, ಯವುದಕ್ಕೂ ಬಗ್ಗಲ್ಲ ಎಂದಿದ್ದಾರೆ.

ಕಲಬುರ್ಗಿಯ ವಿಮನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಅವರು ಯಾವ ಬಾಂಬ್ ಹಾಕಿದರೂ ನಾನು ಬಗ್ಗುವುದೂ ಇಲ್ಲ, ಜಗ್ಗುವುದೂ ಇಲ್ಲ. ಯಾರನ್ನೋ ಹೆದರಿಸಿದಂತೆ ನನ್ನನ್ನು ಹೆದರಿಸಲು ಆಗಲ್ಲ. 1975ರಿಂದ ಇಂತಹ ಬಾಂಬ್ ಗಳನ್ನು ಸಾಕಷ್ಟು ನೋಡಿದ್ದೇನೆ. ಯವುದಕ್ಕೂ ಹೆದರಲ್ಲ ಎಂದು ಟಾಂಗ್ ನೀಡಿದ್ದಾರೆ.

Home add -Advt

ವರ್ಗಾವಣೆ ದಂಧೆ ಆರೋಪ ಮಾಡಿ ಪೆನ್ ಡ್ರೈವ್ ತೋರೊಸಿದರು. ವರ್ಗಾವಣೆ ಬಗ್ಗೆ ದಾಖಲೆಗಳಿದ್ದರೆ ಅದನ್ನು ಲೋಕಾಯುಕ್ತಕ್ಕೆ ನೀಡಲಿ. ಅದನ್ನು ಬಿಟ್ಟು ಅನಗತ್ಯವಾಗಿ ಹೇಳಿಕೆ ನೀಡುವುದರಿಂದ ಯಾವ ಪ್ರಯೋಜನವಿಲ್ಲ ಎಂದು ಹೇಳಿದರು.

Related Articles

Back to top button