Kannada NewsKarnataka NewsLatestPolitics

*ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ವ್ಯಂಗ್ಯವಾಡಿದ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಾವು ಗೆದ್ದರೆ ಕೇಂದ್ರದಲ್ಲಿ ಕೃಷಿ ಸಚಿವನಾಗುವುದಾಗಿ ಹೇಳಿಕೆ ನೀಡಿದ್ದಾರೆ. ಹೆಚ್.ಡಿ.ಕುಮರಸ್ವಾಮಿ ಹೇಳಿಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

Home add -Advt

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಹೆಚ್.ಡಿ.ಕೆ ಕೃಷಿ ಸಚಿವನಾದರೂ ಆಗಲಿ, ವಿತ್ತ ಸಚಿವನಾದರೂ ಆಗಲಿ. ಮೊದಲು ಎನ್ ಡಿಎನೇ ಬರಲ್ಲ. ಇವರು ಮಂತ್ರಿ ಹೇಗೆ ಆಗ್ತಾರೆ? ಎಂದು ಕೇಳಿದ್ದಾರೆ.

ಚುನಾವಣೆಯಲ್ಲಿ ಈಬಾರಿ ಎನ್ ಡಿಎ ಗೆಲ್ಲುವುದಿಲ್ಲ. ಅವರು ಕನಸು ಕಾಣಲಿ ಯಾರು ಬೇಡ ಅಂತಾರೆ? ಆಸೆ ಯಾರು ಬೇಕಾದರೂ ಪಡಬಹುದು ಆದರೆ ಅಧಿಕಾರಕ್ಕೆ ಬರಬೇಕಲ್ಲ ಎಂದು ಟಾಂಗ್ ನೀಡಿದ್ದಾರೆ.

Related Articles

Back to top button