LatestNationalPolitics

*ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಸಚಿವ ಸುದಿವ್ಯ ಕುಮಾರ್ ಸೋನು ಹೃದಯಾಘಾತಕ್ಕೆ ಬಲಿ*

ಪ್ರಗತಿವಾಹಿನಿ ಸುದ್ದಿ: ಜಾರ್ಖಂಡ್ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಮತ್ತು ನಗರಾಭಿವೃದ್ಧಿ ಸಚಿವ ಸುದಿವ್ಯ ಕುಮಾರ್ ಸೋನು ಹೃದಯಾಘಾತದಿಂದ ವಿಧಿವಶರಾಗಿರುವ ಘಟನೆ ನಡೆದಿದೆ.

ಗಿರಿಧಿಹ್‌ನ ಶಾಸಕರಾಗಿದ್ದ ಸುದಿವ್ಯ ಕುಮಾರ್ ಸೋನು ಪ್ರವಾಸೋದ್ಯಮ, ಕಲೆ, ಸಂಸ್ಕೃತಿ, ಕ್ರೀಡೆ ಮತ್ತು ಯುವಜನ ವ್ಯವಹಾರಗಳ ಇಲಾಖೆಗಳ ಉಸ್ತುವಾರಿ ವಹಿಸಿದ್ದರು. ಅವರ ನಿಧನಕ್ಕೆ ದುಃಖ ವ್ಯಕ್ತಪಡಿಸಿದ ಜೆಎಂಎಂ ಪಕ್ಷ ಸಂತಾಪ ಸೂಚಿಸಿದೆ.

Home add -Advt

ಈ ಬಗ್ಗೆ ಎಕ್ಸ್‌ನಲ್ಲಿ, ಜೆಎಂಎಂ ಪಕ್ಷದ ಒಡನಾಡಿ ಮತ್ತು ಜಾರ್ಖಂಡ್ ಸರ್ಕಾರದ ಸಚಿವರಾಗಿದ್ದ ಸುದಿವ್ಯ ಕುಮಾರ್ ಅವರ ಅಕಾಲಿಕ ನಿಧನದಿಂದ ಜಾರ್ಖಂಡ್ ಮುಕ್ತಿ ಮೋರ್ಚಾ ಕುಟುಂಬ ದಿಗ್ಭ್ರಮೆಗೊಂಡಿದೆ. ಅವರ ನಿಧನವು ಕುಟುಂಬದ ಸದಸ್ಯರನ್ನು ದುಃಖಕ್ಕೆ ದೂಡಿದೆ. ಸರ್ಕಾರ ಮತ್ತು ರಾಜ್ಯ ಎರಡಕ್ಕೂ ಅವರ ನಷ್ಟವನ್ನು ಭರಿಸಲಾಗದು. ಪಕ್ಷಕ್ಕೆ ಅವರು ನೀಡಿದ ಕೊಡುಗೆ ಅಪಾರ ಎಂದು ಪಕ್ಷ ಬರೆದುಕೊಂಡಿದೆ.

ಸುದಿವ್ಯ ಕುಮಾರ್ ಅವರ ನಿಧನಕ್ಕೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಸಂತಾಪ ಸೂಚಿಸಿದ್ದು, ಈ ಸಾವು ನನಗೆ ವೈಯಕ್ತಿಕ ನಷ್ಟ ಉಂಟುಮಾಡಿದೆ. ಅವರು ರಾಜ್ಯದ ಗುರುತು ಮತ್ತು ಹಕ್ಕುಗಳಿಗೆ ನೀಡಿದ ಕೊಡುಗೆಗಳನ್ನು ಎಂದಿಗೂ ಮರೆಯಲಾಗುವುದಿಲ್ಲ ಎಂದಿದ್ದಾರೆ.

Related Articles

Back to top button