VTU Add
Beereshwara 36
LaxmiTai 5

*ಎಲ್ಲಾ ಊಹಾಪೋಹ…ಯಾವ ಪತ್ರವೂ ಇಲ್ಲ ಎಂದ ಡಿ.ಕೆ.ಶಿವಕುಮಾರ್*

Anvekar 3

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಚಿವರ ವಿರುದ್ಧ ಶಾಸಕರು ಪತ್ರ ಬರೆದು ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಎಲ್ಲಾ ಊಹಾಪೋಹ ಯಾವ ಪತ್ರವೂ ಬಂದಿಲ್ಲ, ಯಾರೂ ಪತ್ರ ಬರೆದಿಲ್ಲ ಎಂದು ಹೇಳಿದ್ದಾರೆ.

ಶಾಸಕರು ಅವರ ಕ್ಷೇತ್ರಗಳಲ್ಲಿ ಕೆಲಸ ಮಾಡ್ತಿದ್ದಾರೆ. ನಮ್ಮ 5 ಕಾರ್ಯಕ್ರಮಗಳನ್ನು ಜನರಿಗೆ ಯಾವ ರೀತಿ ತಲುಪಿಸುತ್ತಿದ್ದೇವೆ. ಶಾಸಕರಿಗೆ ಗೈಡ್ ಲೈನ್ಸ್ ಕೊಡಬೇಕು. ಪ್ರತಿ ಗ್ರಾಮ ಪಂಚಾಯಿತಿಯಲ್ಲಿಯೂ ನಮ್ಮ ಕಾರ್ಯಕ್ರಮ ಜನರಿಗೆ ತಲುಪಬೇಕು ಎಂದರು.

Cancer Hospital 2
Emergency Service

ಎಲ್ಲಾ ಸಚಿವರು ಶಾಸಕರಿಗೆ ಸ್ಪಂದಿಸುತ್ತಿದ್ದಾರೆ. ಮಾತು ಕೇಳುತ್ತಿದ್ದಾರೆ. ಎಲ್ಲರೂ ಅವರವರ ಕೆಲಸ ಮಾಡುತ್ತಿದ್ದಾರೆ. ಯಾವ ಅಸಮಾಧಾನವೂ ಇಲ್ಲ. ಪತ್ರ ಬರೆದು ದೂರಿದ್ದಾರೆ ಎಂಬುದು ಎಲ್ಲಾ ಊಹಾಪೋಹದ ಸುದ್ದಿ ಹಬ್ಬಿಸಲಾಗುತ್ತಿದೆ ಎಂದರು.


Bottom Add3
Bottom Ad 2