Kannada NewsKarnataka NewsLatestPolitics

*ನಾನೇ ನಿಮ್ಮ ಎದುರಿಗೆ ಬಂದು ನಿಲ್ಲುತ್ತೇನೆ…ಈಶ್ವರಪ್ಪಗೆ ಸವಾಲು ಹಾಕಿದ ಡಿ.ಕೆ.ಸುರೇಶ್*

ರಾಜ್ಯದ ಪರ, ಕನ್ನಡಿಗರ ಪರ ಧ್ವನಿ ಎತ್ತಿದ್ದಕ್ಕೆ ಗುಂಡಿಕ್ಕಿ ಕುಲ್ಲುವ ಬೆದರಿಕೆ ಎಂದು ಕಿಡಿ


ಪ್ರಗತಿವಾಹಿನಿ ಸುದ್ದಿ: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಸಂಸದ ಡಿ.ಕೆ.ಸುರೇಶ್ ನಡುವಿನ ವಾಕ್ಸಮರ ತಾರಕಕ್ಕೇರಿದ್ದು, ಪೊಲೀಸ್ ನೋಟಿಸ್ ಗೂ ಬಗ್ಗದೇ ಕೆ.ಎಸ್.ಈಶ್ವರಪ್ಪ ಸಂಸದ ಡಿ.ಕೆ.ಸುರೇಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ದೇಶ ವಿಭಜನೆ ಮಾತನಾಡುವ ರಾಷ್ಟ್ರದ್ರೋಹಿಗಳನ್ನು ಗುಂಡಿಟ್ಟು ಕೊಲ್ಲಿ ಎಂದು ಹೇಳಿಕೆ ನೀಡಿರುವ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಸಂಸದ ಡಿ.ಕೆ.ಸುರೇಶ್, ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಿದ್ದಕ್ಕೆ, ಕನ್ನಡಿಗರ ಪರ ಧ್ವನಿ ಎತ್ತಿದ್ದಕ್ಕೆ ಕೆ.ಎಸ್.ಈಶ್ವರಪ್ಪ ಗುಂಡಿಕ್ಕಿ ಕೊಲ್ಲಿ ಎಂದು ಹೇಳುತ್ತಿದ್ದಾರೆ. ಗಾಂಧೀಜಿ ಕೊಂದ ಕೀರ್ತಿ ಬಿಜೆಪಿಯವರ ಪಕ್ಷಕ್ಕೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಶ್ವರಪ್ಪನವರೇ ಗುಂಡಿಕ್ಕಿ ಕೊಲ್ಲಿ ಎಂದು ಬೇರೆಯವರಿಗೆ ಯಾಕೆ ಹೇಳುತ್ತೀರಿ? ಬಡವರನ್ನು ಬಾವಿಗೆ ತಳ್ಳಿ ಯಾಕೆ ಆಳ ನೋಡ್ತೀರಿ? ಸ್ವತಃ ನಾನೇ ನಿಮ್ಮ ಎದುರಿಗೆ ಬಂದು ನಿಲ್ಲುತ್ತೇನೆ ನೀವೇ ಗುಂಡಿಟ್ಟು ಕೊಂದು ಬಿಡಿ. ನಾನೇ ನಿಮಗೆ ಸ್ಥಳ, ಸಮಯ ಕೊಡುತ್ತೇನೆ. ನೀವೇ ಬಂದು ನನ್ನ ಕೊಂದು ನಿಮ್ಮ ನಾಯಕರಿಗೆ ಸಂತಸಪಡಿಸಿ ಎಂದು ಸವಾಲು ಹಾಕಿದ್ದಾರೆ.

Home add -Advt


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button