Kannada NewsLatestUncategorized

ಮಹಾರಾಷ್ಟ್ರದಲ್ಲಿ ರಾಜ್ಯದ ಬಸ್ ಗಳ ಮೇಲೆ ಕಲ್ಲು ತೂರಾಟ; ಸಂಚಾರ ಸ್ಥಗಿತ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ರಾಜ್ಯದ ಬಸ್ ಗಳ ಮೇಲೆ ನಿನ್ನೆ ಮಸಿ ಬಳಿದಿದ್ದ ಪುಂಡರು ಇಂದು ಕಲ್ಲುತೂರಾಟ ನಡೆಸಿದ್ದಾರೆ.

ಪುಣೆಯಿಂದ ಅಥಣಿಗೆ ಬರುತ್ತಿದ್ದ ಕೆ ಎಸ್ ಆರ್ ಟಿಸಿ ಬಸ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು, ಬಸ್ ನ ಗಾಜುಗಳನ್ನು ಸಂಪೂರ್ಣವಾಗಿ ಪುಡಿ ಪುಡಿ ಮಾಡಿದ್ದಾರೆ. ಮೀರಜ್-ಕಾಗವಾಡ ಮಾರ್ಗದಲ್ಲಿ ಈ ಘಟನೆ ನಡೆದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಅಥಣಿ ಡಿಪೋಗೆ ಸೇರಿದ ಕೆ ಎಸ್ ಆರ್ ಟಿಸಿ ಬಸ್ ಇದಾಗಿದೆ. ಬಸ್ ನ ಮುಂಭಾಗ ಹಾನಿಯಾಗಿದೆ. ಬಸ್ ಗಳ ಮೇಲೆ ಕಲ್ಲು ತೂರಾಟ ಘಟನೆ ಬೆನ್ನಲ್ಲೇ ಮೀರಜ್-ಕಾಗವಾಡ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.

ಮಹಾರಾಷ್ಟ್ರ ಸರ್ಕಾರಕ್ಕೆ 8 ದಿನಗಳ ಗಡುವು; ಖಡಕ್ ಎಚ್ಚರಿಕೆ ಕೊಟ್ಟ ಜತ್ ತಾಲೂಕು ಜನತೆ

Home add -Advt

https://pragati.taskdun.com/jath-taluqwater-problemkarnataka-maharashtra-border-issue/

Related Articles

Back to top button