
ಪ್ರಗತಿವಾಹಿನಿ ಸುದ್ದಿ: ಕೆಎಂಎಫ್ ಅಧ್ಯಕ್ಷ ಸ್ಥಾನದ ಬಗ್ಗೆ ಮಾಲೂರು ಶಾಸಕ ನಂಜೇಗೌಡ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಂಸದ ಡಿ.ಕೆ.ಸುರೇಶ್, ನಾನು ಯಾವುದೇ ಸ್ಥಾನಕ್ಕೆ ಅರ್ಜಿ ಹಾಕಿಲ್ಲ. ನನಗೆ ಈ ಬಗ್ಗೆ ಮಾಹಿತಿ ಇಲ್ಲ. ನನ್ನ ಮುಂದೆ ಈ ವಿಚಾರ ಚರ್ಚೆಯೂ ಆಗಿಲ್ಲ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತಿಮ ತೀರ್ಮಾನ ಮಾಡುವವರು ಕೆಎಂಎಫ್ ನಿರ್ದೇಶಕರುಗಳು, ಸರ್ಕಾರ, ಮುಖ್ಯಮಂತ್ರಿಗಳು ಹಾಗೂ ಪಕ್ಷ ಎಂದು ತಿಳಿಸಿದರು.
ನಂಜೇಗೌಡರು ನಮ್ಮ ಹಿರಿಯ ನಾಯಕರು. ನಾನು ಅವರ ಪರವಾಗಿ ಬೆಂಬಲವಾಗಿ ನಿಂತಿದ್ದೆ. ಅದರಲ್ಲಿ ಎರಡು ಮಾತಿಲ್ಲ. ಸಧ್ಯಕ್ಕೆ ನನ್ನನ್ನು ಬಮೂಲ್ ಅಧ್ಯಕ್ಷ ಸ್ಥಾನದಲ್ಲಿದ್ದು, ನಾನು ಆ ಜವಾಬ್ದಾರಿ ನಿಭಾಯಿಸುತ್ತಿದ್ದೇನೆ. ನೀವೆಲ್ಲರೂ ನಂದಿನಿ ಹಾಲು, ತುಪ್ಪ ಬಳಸಿ. ರೈತರನ್ನು ಉಳಿಸಿ ಎಂದು ಮನವಿ ಮಾಡಿದರು.
ನೀವು ನಂದಿನಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗುತ್ತೀರಾ ಎಂದು ಕೇಳಿದಾಗ, ಈಗ ನಾನು ಯಾವ ಕೆಲಸ ಮಾಡುತ್ತಿದ್ದೇನೆ? ಬಣ್ಣ ಹಾಕಿಲ್ಲ ಅಷ್ಟೇ ಎಂದು ತಿಳಿಸಿದರು.