Latest

*ಕೌಟುಂಬಿಕ ಮೌಲ್ಯ, ಕುಟುಂಬದ ಉಳಿವಿಗಾಗಿ ಹೋರಾಟ; ಅಂತಹ ಮಹಿಳೆಯರಿಗೆ ಧ್ವನಿಯಾಗಿ ಎಂದ ಡಿ.ರೂಪಾ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಐಪಿಎಸ್ ಅಧಿಕಾರಿ ಡಿ.ರೂಪಾ ಹಾಗೂ ಐಎ ಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸಂಘರ್ಷ ವಿಚಾರ ಇದೀಗ ಮತ್ತೊಂದು ಹಂತ ತಲುಪಿದೆ. ಆರ್ ಟಿ ಐ ಕಾರ್ಯಕರ್ತ ಗಂಗರಾಜು ಜೊತೆ ಡಿ.ರೂಪಾ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ವೈರಲ್ ಬೆನ್ನಲ್ಲೇ ರೋಹಿಣಿ ಸಿಂಧೂರಿಯಿಂದ ಡಿ.ರೂಪಾ ಕುಟುಂಬಕ್ಕೂ ತೊಂದರೆಯಾಗಿತ್ತು ಎಂಬ ವಿಚಾರ ಭಾರಿ ಚರ್ಚೆಗೆ ಕಾರಣಾಗಿದೆ. ಇದರ ಬೆನಲ್ಲೇ ಡಿ.ರೂಪಾ ಸಾಮಾಜಿಕ ಜಾಲತಾಣಗಳಲ್ಲಿ ಸಾಲು ಸಾಲು ಪೋಸ್ಟ್ ಗಳನ್ನು ಹಾಕಿದ್ದು ಭ್ರಷ್ಟಾಚಾರದ ವಿರುದ್ಧ ಹೋರಾಟ, ಕುಟುಂಬದ ಉಳಿವಿಗಾಗಿ ಹೋರಾಟದ ನಿಟ್ಟಿನಲ್ಲಿ ಬರೆದುಕೊಂಡಿದ್ದಾರೆ.

ವೈಯಕ್ತಿಕ ವಿಚಾರಗಳ ಬಗ್ಗೆ ಚರ್ಚೆ ಬೇಡ, ದಯವಿಟ್ಟು ನಾನು ಹೇಳಿದ ಭ್ರಷ್ಟಾಚಾರ ವಿಷಯದ ಬಗ್ಗೆ ಮಾತ್ರ ಚರ್ಚೆಯಾಗಲಿ. ಭ್ರಷ್ಟಾಚಾರದ ವಿರುದ್ಧ ಹೋರಾಡುವ ಯಾರನ್ನೂ ನಾನು ತಡೆದಿಲ್ಲ ಎಂದಿದ್ದಾರೆ.

ಇದೇ ವೇಳೆ ವೈಯಕ್ತಿಕ ವಿಚಾರಗಳನ್ನು ಮಾತನಾಡುವುದಾದರೆ ರಾಜ್ಯದಲ್ಲಿ ಓರ್ವ ಐಎ ಎಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮಿಳುನಾಡಿನಲ್ಲಿ ಓರ್ವ ಐಪಿಎಸ್ ಅಧಿಕಾರಿ ಮೃತಪಟ್ಟರು. ಕರ್ನಾಟಕದಲ್ಲಿ ಐಎಎಸ್ ದಂಪತಿ ಡಿವೋರ್ಸ್ ಪಡೆದರು. ಆದರೆ ನಾನು ಮತ್ತು ನನ್ನ ಪತಿ ಇನ್ನೂ ಒಟ್ಟಿಗೆ ಇದ್ದೇವೆ. ನಾವು ಇನ್ನೂ ಕುಟುಂಬವನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದೇವೆ. ಇದಕ್ಕೆಲ್ಲ ಕಾರಣ ಯಾರು? ಅವರನ್ನು ಪ್ರಶ್ನೆ ಮಾಡಿ. ಇಲ್ಲದಿದ್ದರೆ ಇನ್ನು ಹಲವು ಕುಟುಂಬಗಳು ನಾಶವಾಗುತ್ತವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ನಾನು ಧೈರ್ಯವಂತ ಮಹಿಳೆ ನಾನು ಹೋರಾಡುತ್ತೇನೆ. ಎಲ್ಲಾ ಮಹಿಳೆಯರಿಗೂ ಹೋರಾಟ ಮಾಡುವ ಶಕ್ತಿ ಇರುವುದಿಲ್ಲ. ದಯವಿಟ್ಟು ಅಂತಹ ಮಹಿಳೆಯರಿಗೆ ಧ್ವನಿಯಾಗಿ. ನಾನು ಅಂತಹ ಮಹಿಳೆಯರ ಪರ ಸದಾ ಇದ್ದೇನೆ. ಭಾರತ ಕೌಟುಂಬಿಕ ಮೌಲ್ಯಗಳಿಗೆ ಹೆಸರುವಾಸಿ.ಆ ಮೌಲ್ಯಗಳನ್ನು ಮುಂದುವರೆಸೋಣ ಎಂದು ಕರೆ ನೀಡಿದ್ದಾರೆ.
*ಐಪಿಎಸ್ ರೂಪಾ V/S ಐಎಎಸ್ ರೋಹಿಣಿ ವಿವಾದಕ್ಕೆ ಕಾರಣ ಬಹಿರಂಗ ; ಆಡಿಯೋ ವೈರಲ್*

Home add -Advt

https://pragati.taskdun.com/d-rooparohini-sindhurigangarajaudio-viral/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button