ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಐಪಿಎಸ್ ಅಧಿಕಾರಿ ಡಿ.ರೂಪಾ ಹಾಗೂ ಐಎ ಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸಂಘರ್ಷಕ್ಕೆ ರಾಜ್ಯ ಸರ್ಕಾರ ಮೂವರು ಅಧಿಕಾರಿಗಳ ವರ್ಗಾವಣೆ ಮಾಡಿ ಟ್ವಿಸ್ಟ್ ನೀಡಿದೆ. ಇದರ ಬೆನ್ನಲ್ಲೇ ಡಿ.ರೂಪಾ ಹಾಗೂ ಆರ್ ಟಿ ಐ ಕಾರ್ಯಕರ್ತ ಗಂಗರಾಜು ಸಂಭಾಷಣೆಯ ಆಡಿಯೋ ವೈರಲ್ ಆಗಿದೆ.
ಜನವರಿ 30ರಂದು ಡಿ.ರೂಪಾ ಸಾಮಾಜಿಕ ಕಾರ್ಯಕರ್ತ ಗಂಗರಾಜುಗೆ ಕರೆ ಮಾಡಿದ್ದು, ಸುಮಾರು 25 ನಿಮಿಷಗಳ ಕಾಲ ಮಾತನಾಡಿದ್ದಾರೆ. ಆಡಿಯೋದಲ್ಲಿಯೂ ರೋಹಿಣಿ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದು, ಆಕೆಯಿಂದಾಗಿ ನಮ್ಮ ಕುಟುಂಬವೂ ಚೆನ್ನಾಗಿಲ್ಲದಂತಾಗಿದೆ ಎಂದು ಬೇಸರ ತೋಡಿಕೊಂಡಿದ್ದಾರೆ. ರೋಹಿಣಿ ವಿರುದ್ಧ ದೂರು ದಾಖಲಿಸುವಂತೆಯೂ ಹೇಳಿದ್ದಾರೆ.
ರೋಹಿಣಿ ಸಿಂಧೂರಿ ಕುಟುಂಬದವರದ್ದು ರಿಯಲ್ ಎಸ್ಟೇಟ್ ಬ್ಯುಸಿನೆಸ್, ಆಕೆ ತನ್ನ ಪತಿಯ ರಿಯಲ್ ಎಸ್ಟೇಟ್ ಪ್ರಮೋಟ್ ಮಾಡಲು ಅಧಿಕಾರವನ್ನು ಬಳಸಿಕೊಳ್ಳುತ್ತಿದ್ದಾಳೆ. ಅಧಿಕಾರದಿಂದ ಎಲ್ಲಾ ಲ್ಯಾಂಡ್ ಗಳನ್ನು ಡೀಲ್ ಮಾಡಿಕೊಳ್ಳುತ್ತಿದ್ದಾಳೆ. ಭೂ ಸುಧಾರಣೆ ಹಾಗು ಸರ್ವೆ ಇಲಾಖೆಯಲ್ಲಿದ್ದ ನಮ್ಮವರನ್ನು ಬಳಸಿಕೊಂಡು ಲ್ಯಾಂಡ್ ಡೀಲ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ರೋಹಿಣಿ ದೆಸೆಯಿಂದ ನಮ್ಮ ಕುಟುಂಬದಲ್ಲಿಯೂ ನೆಮ್ಮದಿ ಇಲ್ಲದಾಗಿದೆ. ರೋಹಿಣಿ ಕ್ಯಾನ್ಸರ್ ರೋಗ ಇದ್ದಂತೆ ಎಲ್ಲರನ್ನು ಬುಟ್ಟಿಗೆ ಹಾಕಿಕೊಳ್ತಾ ಬರ್ತಾಳೆ. ಕಳೆದ 8 ವರ್ಷಗಳಿಂದ ಗಮನಿಸ್ತಿದೀನಿ. ನನ್ನ ಗಂಡನ ಹಿಂದೆಯೇ ಬಿದ್ದಿದ್ದಾಳೆ. ಆಯಮ್ಮನ ದೆಸೆಯಿಂದ ನಮ್ಮ ಕುಟುಂಬ ಹಾಳಾಗ್ತಿದೆ. ಮುನಿಶ್ ಮನೆ ಕಡೆ ಗಮನಕೊಡುತ್ತಿಲ್ಲ. ಮನೆಯ ಬಗ್ಗೆ ಇವರಿಗೆ ಲಕ್ಷ್ಯ ಇಲ್ಲ. ಡಿ.ಕೆ.ರವಿ ವಿಷಯದಲ್ಲಿ ಆಗಿದ್ದೂ ಹಾಗೆಯೇ. ಅವರಿಂದ ನಮ್ಮ ಫ್ಯಾಮಿಲಿಗೆ ಯಾವುದೇ ಯೂಸ್ ಇಲ್ಲ. ನಾನೇ ಮುನೀಶ್ ಟ್ರಾನ್ಸ್ ಫರ್ ಗೆ ರಿಕ್ವೆಸ್ಟ್ ಮಾಡಿದ್ದೇನೆ ಎಂದು ಹೇಳಿದ್ದಾರೆ.
ರೋಹಿಣಿ ಸಿಂಧೂರಿ ಕುಟುಂಬದ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಗಾಗಿ ಅಧಿಕಾರಿಗಳನ್ನೇ ಬಳಸಿಕೊಂಡು ತಮ್ಮ ಕೆಲಸ ಸಾಧಿಸುತ್ತಿದ್ದರೇ? ಈ ಮೂಲಕ ಪತಿ ಭೂ ವಹಾರಕ್ಕೆ ಸಹಾಯ ಮಾಡುತ್ತಿದ್ದರೇ? ಇದೇ ಕಾರಣಕ್ಕೆ ರೋಹಿಣಿ ಹೋದ ಕಡೆಯಲ್ಲೆಲ್ಲ ವಿವಾದಗಳು ಆರಂಭವಾಗುತ್ತಿದ್ದವೇ? ಎಂಬ ಅನುಮಾನ ಆರಂಭವಾಗಿದೆ. ಡಿ.ರೂಪಾ ಹಾಗೂ ರೋಹಿಣಿ ಸಂಘರ್ಷ ಮತ್ತೊಂದು ಹಂತ ತಲುಪಿದ್ದು, ತನಿಖೆಯಿಂದಷ್ಟೇ ಸತ್ಯಾಸತ್ಯತೆ ಬಯಲಿಗೆ ಬರಬೇಕಿದೆ.
ಒಪಿಎಸ್ ನೌಕರರ ಮೇಲೆ ಷಡಕ್ಷರಿ ಕಡೆಯವರಿಂದ ಹಲ್ಲೆ ಆರೋಪ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ