*BREAKING: ಕಿತ್ತಾಟ ಪ್ರಕರಣ; ಮೂವರು ಅಧಿಕಾರಿಗಳ ತಲೆದಂಡ; ಡಿ.ರೂಪಾ, ರೋಹಿಣಿಗೆ ಸ್ಥಳ ನಿಯೋಜಿಸದೇ ವರ್ಗಾವಣೆ*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಐಪಿಎಸ್ ಅಧಿಕಾರಿ ಡಿ.ರೂಪಾ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಸಂಘರ್ಷ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಮೂವರು ಅಧಿಕಾರಿಗಳ ತಲೆದಂಡವಾಗಿದೆ.
ಮಹಿಳಾ ಅಧಿಕಾರಿಗಳ ಕಿತ್ತಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಐಪಿಎಸ್ ಅಧಿಕಾರಿ ಡಿ.ರೂಪಾ ಹಾಗೂ ಐಎ ಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಸ್ಥಳ ನಿಯೋಜನೆ ಮಾಡದೇ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಇದೇ ವೇಳೆ ಡಿ.ರೂಪಾ ಪತಿ ಐಎ ಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ ಅವರನ್ನು ಕೂಡ ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಾಗಿದ್ದ ರೋಹಿಣಿ ಸಿಂಧೂರಿ ಜಾಗಕ್ಕೆ ಹೆಚ್.ಬಸವರಾಜೇಂದ್ರ ಅವರನ್ನು ನೇಮಕ ಮಾಡಲಾಗಿದೆ. ಕರಕುಷಲ ನಿಗಮ ಎಂಡಿ ಆಗಿದ್ದ ಡಿ.ರೂಪಾ ಮೌದ್ಗಿಲ್ ಅವರ ಜಾಗಕ್ಕೆ ಡಿ.ಭಾರತಿ ಅವರನ್ನು ನೇಮಕ ಮಾಡಿದೆ. ಸರ್ವೆ ಮತ್ತು ಭೂ ದಾಖಲೆಗಳ ಆಯುಕ್ತರಾಗಿದ್ದ ಮುನೀಶ್ ಮೌದ್ಗಿಲ್ ಅವರನ್ನು ಆಡಳಿತ ಸುಧಾರಣ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ.
*ಡಿ.ರೂಪಾ-ರೋಹಿಣಿ ಸಿಂಧೂರಿ ಸಂಘರ್ಷ ವಿಚಾರ; ಸಿಎಂ ಬೊಮ್ಮಾಯಿ ಖಡಕ್ ಪ್ರತಿಕ್ರಿಯೆ*
https://pragati.taskdun.com/d-rooparohini-sindhuriclashcm-basavaraj-bommaireaction/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ