
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ಮಾಜಿ ಸಚಿವ, ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿ ಗುರುವಾರ ಸುಮಾರು 9 ಸಾವಿರ ಕುಟುಂಬಗಳಿಗೆ ಆಹಾರ ಸಾಮಗ್ರಿ ವಿತರಿಸಿದರು.
ಮಹಾಮಾರಿ ಕೊರೋನಾ ಕಾಯಿಲೆಯ ತಡೆಗಟ್ಟುವ ಸಲುವಾಗಿ ದೇಶದಲ್ಲಿ ಲಾಕ್ಡೌನ್ ಇರುವುದರಿಂದ ಪ್ರಕಾಶ ಹುಕ್ಕೇರಿ ಹಾಗೂ ಗಣೇಶ ಹುಕ್ಕೇರಿ ನಿರಂತರವಾಗಿ ಬಡವರಿಗೆ ವಿವಿಧ ಸಾಮಗ್ರಿಗಳನ್ನು ವಿತರಿಸುತ್ತಿದ್ದಾರೆ.

ಈ ಸಂಧರ್ಭದಲ್ಲಿ ಸದಲಗಾ ಪಟ್ಟಣದ ಪುರಸಭೆ ಸದಸ್ಯರು, ಆ ಭಾಗದ ಮುಖ್ಯಸ್ಥರು, ಊರಿನ ಹಿರಿಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವಡಗೂಲ ಗ್ರಾಮದಲ್ಲಿ ಮಾಜಿ ಸಂಸದರಾದ ಪ್ರಕಾಶ ಹುಕ್ಕೇರಿಯರು ಗ್ರಾಮದ ಜನರಿಗೆ ಸುಮಾರು 600 ಜೋಳದ ಕಿಟ್ಟಗಳನ್ನು ವಿತರಿಸಿದರು.