Cancer Hospital 2
Beereshwara 36
LaxmiTai 5

*ವಿದ್ಯಾವತಿ ಭಜಂತ್ರಿ ಅವರಿಗೆ ಅಪ್ಪ ಪ್ರಶಸ್ತಿ ಪ್ರದಾನ*

Anvekar 3
GIT add 2024-1

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಅವರಿಗೆ ಬುದ್ಧ, ಬಸವ, ಅಂಬೇಡ್ಕರ್ ಜನಕಲ್ಯಾಣ ಪ್ರತಿಷ್ಠಾನದ ವತಿಯಿಂದ ಶುಕ್ರವಾರ ನಗರದ ಲಕ್ಷ್ಮೀ ಟೆಕಡಿಯಲ್ಲಿ ಇರುವ ಹುಕ್ಕೇರಿ ಹಿರೇಮಠದ ಸಭಾಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಅವರಿಗೆ ಅಪ್ಪ ಪ್ರಶಸ್ತಿಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜಿ ಅವರು ಮಹಾದೇವ ಬಿರಾದಾರ ಅವರು ತಮ್ಮ ತಂದೆಯ ಹೆಸರಿನಿಂದ ಈಗಾಗಲೇ ರಾಜ್ಯದ ಪ್ರತಿಷ್ಠಿತ ವ್ಯಕ್ತಿಗಳಿಗೆ ಅಪ್ಪ ಪ್ರಶಸ್ತಿ ನೀಡಿ ಗೌರವಿಸಿದ್ದನ್ನು ನಾವು ನೋಡಿದ್ದೇವೆ. ಕನ್ನಡ ಸಾಹಿತ್ಯ ಪರಿಷತ್ ಅದ್ಯಕ್ಷ ಡಾ. ಮಹೇಶ ಜೋಶಿ, ಡಾ. ಸಿ ಸೋಮಶೇಖರ್, ಮಹಾಲಿಂಗಪುರದ ಇಬ್ರಾಹಿಂ ಸುತಾರ, ಡಾ. ಸರ್ಜು ಕಾಟ್ಕರ್ ಅವರನ್ನು  ಮೊದಲು ಮಾಡಿಕೊಂಡು ಅನೇಕರಿಗೆ ಈ ಪ್ರಶಸ್ತಿ ಲಭ್ಯವಾಗಿದೆ. 2024ನೇ ಸಾಲಿನ ಅಪ್ಪ ಪ್ರಶಸ್ತಿಯನ್ನು  ವಿದ್ಯಾವತಿ ಭಜಂತ್ರಿ ಅವರಿಗೆ ನೀಡುತ್ತಿರುವುದು ನಮಗೆ ಅತೀವ ಸಂತಸ ತಂದಿದೆ ಎಂದರು.

ನಮ್ಮ ಸಂಸ್ಕೃತಿ ಉಳಿಯಬೇಕು ಎಂದರೆ ತಂದೆ ತಾಯಿಯರಿಗೆ ಗೌರವಿಸುವ ಕಾರ್ಯವನ್ನು ಎಲ್ಲರೂ ಮಾಡಬೇಕು. ಆ ನಿಟ್ಟಿನ ಕಾರ್ಯ ವೇದಿಕೆ ಮಾಡುತ್ತಿರುವುದು ಅಭಿಮಾನದ ಸಂಗತಿ ಎಂದರು.  

Emergency Service

ಪ್ರಶಸ್ತಿ ಸ್ವೀಕರಿಸಿದ ವಿದ್ಯಾವತಿ ಭಜಂತ್ರಿ ಅವರು ಮಾತನಾಡಿ, ಅಪ್ಪ ಪ್ರಶಸ್ತಿಯನ್ನು ತೆಗೆದುಕೊಳ್ಳುವಾಗ ನಮ್ಮ ತಂದೆಯ ನೆನಪು ಕೂಡ ಆಯಿತು. ತಾಯಿ ನಮ್ಮನ್ನು ಅತಿಯಾಗಿ  ಪ್ರೀತಿಸಿ, ಸಾಕಿ ಸಲುಹಿದರೆ ತಂದೆ ನಮ್ಮ ಎಲ್ಲ ಕಷ್ಟಗಳನ್ನು ಪರಿಹರಿಸಿ ನಮಗೆ ಬೆಳೆಯಲು ಅನುಕೂಲ ಮಾಡಿಕೊಟ್ಟ ತಂದೆ ನಿಜವಾದ ಹೀರೊ. ಅವರ ಹೆಸರಿನಲ್ಲಿ ಪ್ರಶಸ್ತಿ ಲಭ್ಯವಾಗಿರುವುದು ಸಂತಸದ ಸಂಗತಿ ಎಂದರು.                 

ವೇದಿಕೆಯ ಸಾನಿಧ್ಯವನ್ನು ಬಾಗೋಜಿಕೊಪ್ಪದ ಶ್ರೀ ಷ ಬ್ರ ಡಾ. ಶಿವಲಿಂಗ ಮುರುಗರಾಜೇಂದ್ರ ಮಹಾಸ್ವಾಮಿಗಳವರು ವಹಿಸಿ ವೇದಿಕೆ ಮಾಡುತ್ತಿರುವ ಕಾರ್ಯವನ್ನು ಮೆಚ್ಚಿ ಸ್ಪಂದಿಸಿದರು. ವೇದಿಕೆಯ ಮೇಲೆ ಪ್ರತಿಷ್ಠಾನದ ಸಂಚಾಲಕ ಮಹಾದೇವ ಬಿರಾದಾರ ನಿ, ಪ್ರಾಂಶುಪಾಲ ಸುಮಂಗಲ ಸಿಂತ್ರೆ, ಮುಜರಾಯಿ ಇಲಾಖೆಯ ನಿವೃತ್ತ ಅಧಿಕಾರಿ ರವಿ ಕೋಟಾರಗಸ್ತಿ, ಸಾಹಿತಿ ಬಸವರಾಜ ಗಾರ್ಗಿ, ಶಿಕ್ಷಕ ಬಸವರಾಜ್ ಸುನಗಾರ್, ಅನಂತಕುಮಾರ್  ಬ್ಯಾಕೂಡ ಇದ್ದರು.

Bottom Add3
Bottom Ad 2