
ಪ್ರಗತಿವಾಹಿನಿ ಸುದ್ದಿ; ಮಂಗಳೂರು: ದಾರಿಯಲ್ಲಿ 5 ಹ್ಯಾಂಡ್ ಗ್ರೆನೇಡ್ ಗಳು ಪತ್ತೆಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದಲ್ಲಿ ನಡೆದಿದೆ.
ಭೂಸೇನಾ ರೆಜಿಮೆಂಟ್ ನಲ್ಲಿ ಎಸ್ ಸಿಒ ಆಗಿ ನಿವೃತ್ತಿಯಾಗಿರುವ ಜಯಕುಮಾರ್ ನೀಡಿದ ಮಾಹಿತಿ ಆಧರಿಸಿ 5 ಗ್ರೆನೇಡ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಳಂತಿಲ ಬಳಿ ದಾರಿಯಲ್ಲಿ ಹೋಗುವಾಗ ಜಯಕುಮಾರ್ ಅವರಿಗೆ ಗ್ರೆನೇಡ್ ಗಳು ಪತ್ತೆಯಾಗಿದ್ದು, ಅವುಗಳನ್ನು ಮನೆಯ ಅಂಗಳದ ಬಳಿ ಇಟ್ಟು ಪೊಲೀಸರಿಗೆ ಮಾಹಿತಿ ನೀಡಿದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗ್ರೆನೇಡ್ ವಶಕ್ಕೆ ಪಡೆದಿದ್ದು, ಪ್ರಕರಣ ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದ್ದಾರೆ.
ಇಂದಿನಿಂದ 3 ದಿನಗಳ ಕಾಲ ಭಾರಿ ಮಳೆ ಎಚ್ಚರಿಕೆ